March 12, 2026

Newsnap Kannada

The World at your finger tips!

ವಿಧಾನ ಸಭೆ ಅಧಿವೇಶನ ಮೊಟಕು:ಡಿ. 10 ಕ್ಕೆ ಲಾಸ್ಟ್

Spread the love

ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಡಿ 15ರವರೆಗೆ ನಿಗದಿಯಾಗಿದ್ದ ವಿಧಾನ ಸಭೆ ಅಧಿವೇಶನ ವನ್ನು ಡಿ 10 ಕ್ಕೆ ಅಂತ್ಯಗೊಳಿಸಲು ನಿರ್ಧರಿಸಲಾಗಿದೆ.

ರಾಜ್ಯದ 15 ವಿಧಾನಸಭೆಯ 8 ಅಧಿವೇಶನವನ್ನು ಡಿ. 7ರಿಂದ 15ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಡಿಸೆಂಬರ್ 7ರಂದು ರಾಜ್ಯ ಉಭಯ ಸದನಗಳ ಕಲಾಪ ಕೂಡ ಆರಂಭಗೊಂಡಿತ್ತು.

ಈಗ ರಾಜ್ಯದ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಡಿ 15ಕ್ಕೆ ಮುಕ್ತಾಯಗೊಳ್ಳಬೇಕಿದ್ದ ಅಧಿವೇಶನವನ್ನು ಡಿಸೆಂಬರ್ 10ಕ್ಕೆ ಮೊಟಕುಗೊಳಿಸಲು ಕಲಾಪ ಸಮಿತಿ ಸಭೆಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಕಲಾಪ ಸಮಿತಿ ಸಭೆಯಲ್ಲಿ ಡಿ. 15ರವರೆಗೆ ನಿರ್ಧರಿಸಲಾಗಿದ್ದ ಉಭಯ ಸದನಗಳ ಕಲಾಪವನ್ನು ಡಿಸೆಂಬರ್ 10 (ಗುರುವಾರದಂದು) ರಂದೇ ಮುಕ್ತಾಯಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.

error: Content is protected !!