- ಮನೆಯಲ್ಲೇ ನ್ಯೂಇಯರ್ ಪಾರ್ಟಿ ಮಾಡಲು ಯಾವುದೇ ತೊಂದರೆ ಇಲ್ಲ.
- ಮನೆಯಲ್ಲಿ ನ್ಯೂಇಯರ್ ಸಂಭ್ರಮಾಚರಣೆಗೆ ಎಣ್ಣೆ ( ಮದ್ಯ) ಸ್ಟಾಕ್ ಮಾಡಲು ಜನ ಸಿದ್ದತೆ ಮಾಡುತ್ತಿದ್ದಾರೆ.
- ವರ್ಷಾಚರಣೆಗೆ ಇನ್ನೂ 26 ದಿನ ಬಾಕಿ ಇರುವಾಗಲೇ ಮದ್ಯದಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರು
ಕರೋನಾ ನಿಯಂತ್ರಣಕ್ಕಾಗಿ ಡಿ. 31 ಹಾಗೂ ಜ.1ರಂದು ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ಇಂದು ಅಂತಿಮ ನಿರ್ಧಾರ ಆಗಲಿದೆ.
ಒಂದು ವೇಳೆ ಎರಡು ದಿನಗಳ ಕಾಲ ಮದ್ಯಪಾನಕ್ಕೆ ನಿಷೇಧ ಹೇರಿ ಮದ್ಯದಂಗಡಿ ಮುಚ್ಚಿದರೆ ಸರ್ಕಾರಕ್ಕೆ ಆ ಎರಡು ದಿನಗಳಲ್ಲಿ ಕನಿಷ್ಠ 1 ಸಾವಿರ ಕೋಟಿ ರು ನಷ್ಟ ವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಕೊರೋನಾ ವೇಳೆ ಅಬ್ಕಾರಿ ಇಲಾಖೆಗೆ ಅಂದಾಜು 4 ಸಾವಿರ ಕೋಟಿ ರು ನಷ್ಟ ವಾಗಿದೆ ಆದರೂ ಕೊರೋನಾ ತಡೆಯಲು ಸರ್ಕಾರಕ್ಕೆ ಈ ದಾರಿ ಬಿಟ್ಟರೆ ಪರ್ಯಾಯ ಮಾರ್ಗವೇ ಇಲ್ಲ ಎಂಬಂತಾಗಿದೆ.
ಮನೆಯಲ್ಲೇ ಸಂಭ್ರಮ ಕ್ಕೆ ನೋ ಪ್ರಾಬ್ಲಾಮ್ :
ಮನೆಯಲ್ಲೇ ನ್ಯೂಇಯರ್ ಪಾರ್ಟಿ ಮಾಡಲು ಯಾವುದೇ ತೊಂದರೆ ಇಲ್ಲ. ಹೀಗಾಗಿ ಮನೆಯಲ್ಲಿ ನ್ಯೂಇಯರ್ ಸಂಭ್ರಮಾಚರಣೆಗೆ ಎಣ್ಣೆ ( ಮದ್ಯ) ಸ್ಟಾಕ್ ಮಾಡಲು ಜನ ಸಿದ್ದತೆ ಮಾಡುತ್ತಿದ್ದಾರೆ.
ವರ್ಷಾಚರಣೆಗೆ ಇನ್ನೂ 25 ಬಾಕಿ ಇರುವಾಗಲೇ ಮದ್ಯದಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ ಎನ್ನುವ ಖುಷಿ ಲಿಕ್ಕರ್ ಅಂಗಡಿ ಮಾಲೀಕರದ್ದು.
ಸಮಿತಿ ವರದಿಯಲ್ಲಿ ಏನಿದೆ? :
ಮುಂದಿನ 48 ದಿನ ರಾಜ್ಯದಲ್ಲಿ ಕರೊನಾ 2ನೇ ಅಲೆ ಹೆಚ್ಚಾಗುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಬಂದ್ ಆಗುವ ಸಾಧ್ಯತೆಯಿದೆ. ಬೇರೆ ದೇಶಗಳಲ್ಲಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮುಂದಿನ 45-90 ದಿನದೊಳಗೆ 2ನೇ ಅಲೆ ಬರುತ್ತದೆ ಎಂಬ ನಿರೀಕ್ಷೆ ಇದೆ. ಹಾಗಾಗಿ, ರಾಜ್ಯದಲ್ಲೂ 2ನೇ ಅಲೆ ಬರುವ ಸಾಧ್ಯತೆ ಇದೆ ಎಂದು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ.
ಈ ನಿಟ್ಟಿನಲ್ಲಿ ಮದುವೆ ಸಮಾರಂಭಕ್ಕೆ 100, ರಾಜಕೀಯ ಹಾಗೂ ದಾರ್ಮಿಕ ಸಮಾರಂಭಕ್ಕೆ 200 ಹಾಗೂ ಅಂತ್ಯಕ್ರಿಯೆಯಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಈ ನಿಯಮಗಳನ್ನು ಮತ್ತಷ್ಟು ಕಟ್ಟು ನಿಟ್ಟಾಗಿ ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಾಗುತ್ತಿದೆ.
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ