ಬೆಂಗಳೂರು
ಸಂಗೀತ ಸಾಮ್ರಾಟ್ ಎಸ್.ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡು ಬರುತ್ತಿದೆ. ಬಹು ಭಾಷೆಯಲ್ಲಿ ಹಾಡುವ ಕೋಗಿಲೆ ಕಂಠ ಸಿರಿಯಲ್ಲಿ ಹಾಡು ಕೇಳಿವ ಭಾಗ್ಯ ಶೋತೃಗಳದ್ದು.
ಎಸ್ಪಿಬಿ ಆರೋಗ್ಯ ಸುಧಾರಣೆ ಸುದ್ದಿ ಸಹಜವಾಗಿಯೇ ಬಾಲು ಕುಟುಂಬ ಮತ್ತು ಅಭಿಮಾನಿಗಳಲ್ಲಿ ಸಂತಸ ತಂದಿದೆ.15 ದಿನಗಳಿಂದ ಹಿಂದೆ ಇದ್ದ ಆತಂಕ ಈಗಿಲ್ಲ. ಅಂದು ಎಸ್ಪಿ ಮಾತು ಕೊಟ್ಟಂತೆ ಮತ್ತೆ ಬಂದು ಹಾಡಲಿದ್ದಾರೆ. ಅಭಿಮಾನಿಗಳ ಪಾರ್ಥನೆ ಮತ್ತು ಆ ದಿವ್ಯಶಕ್ತಿ ಗಾನಗಂಧರ್ವ ಮತ್ತೆ ಎದ್ದು ಬರುವಂತೆ ಮಾಡಿದೆ
ಕೆಲ ದಿನಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಬಾಲು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.
ಆಗಸ್ಟ್ 5 ರಂದು ಕೊರೊನಾ ಪಾಸಿಟಿವ್ ಬಂದಿದ್ದ ಕಾರಣ ಎಸ್ ಪಿ ಬಿ ಆಸ್ಪತ್ರೆಗೆ ದಾಖಲಾಗಿದ್ದರು.. ಅಲ್ಲದೇ ಕೊರೊನಾ ದೃಢಪಟ್ಟ ಬಗ್ಗೆ ಸ್ವತಃ ಬಾಲಸುಬ್ರಮಣ್ಯಮ್ ಫೇಸ್ಬುಕ್ ವೀಡಿಯೋ ಮೂಲಕ ತಿಳಿಸಿದ್ದರು.. ಯಾರು ಆತಂಕ ಪಡುವ ಅಗತ್ಯ ಇಲ್ಲ. ಶೀಘ್ರದಲ್ಲೇ ಗುಣಮುಖನಾಗಿ ಬರ್ತೀನಿ ಅಂತ ಹೇಳಿದರು.
ಎಸ್ಪಿಬಿ ಕೋವಿಡ್-19 ಸೋಂಕಿಗೆ ತುತ್ತಾಗಿರುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗಿದೆ. ಬೇರೆ ಏನು ಸಮಸ್ಯೆ ಇಲ್ಲ. ಸದ್ಯ ಅವರು ಪ್ರಜ್ಞಾಸ್ಥಿತಿಯಲ್ಲಿದ್ದಾರೆ . ಇತ್ತೀಚೆಗೆ ಪುತ್ರ ಚರಣ್ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರೊಟ್ಟಿಗೆ ಮಾತನಾಡಲು ಎಸ್ಪಿಬಿ ಕೈಸನ್ನೆ ಮೂಲಕ ಪ್ರಯತ್ನಿಸಿದ್ದಾರೆ. ಈ ವಿಚಾರವನ್ನ ಚರಣ್ ಹಂಚಿಕೊಂಡಿದ್ದರು.
ಸಂಗೀತದ ಥೆರಪಿ:
ಎಸ್ಪಿಬಿ ಅವರಿಗೆ ಮ್ಯೂಸಿಕ್ ಥೆರಪಿ ನೀಡುತ್ತಿರುವುದಾಗಿ ಕೆಲ ದಿನಗಳ ಹಿಂದೆ ಮಾಹಿತಿ ಸಿಕ್ಕಿತ್ತು. ಐಸಿಯು ಘಟಕದಲ್ಲಿ ಅವರಿಗೆ ಸದಾ ಅವರೇ ಹಾಡಿರುವ ಭಕ್ತಿಗೀತೆಗಳು, ಸಿನಿಮಾ ಹಾಡುಗಳನ್ನ ಕೇಳಿಸಿ ಮನೋಬಲ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಮ್ಯೂಸಿಕ್ ಥೆರಪಿ ಕೂಡ ಬಾಲು ಆರೋಗ್ಯ ಸುಧಾರಣೆಗೆ ಶಕ್ತಿ ತುಂಬಿದೆ ಅಂದ್ರೆ ತಪ್ಪಾಗಲ್ಲ. ಸದ್ಯ ಎಸ್ಪಿಬಿ ಆರೋಗ್ಯ ಸ್ಥಿತಿ ಹೇಗಿದೆ ಅನ್ನೋದನ್ನ ಖುದ್ದು ಪುತ್ರ ಚರಣ್, ಹೀಗೆ ಹೇಳಿದ್ದಾರೆ.
ತಂದೆಯವರ ಲಂಗ್ಸ್ ಎಕ್ಸ್‌ರೇಯನ್ನು ತೋರಿಸಿದರು. ಅಪ್ಪನ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬರುತ್ತಿದೆ. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಬಹಳ ಸಮಯದಿಂದ ಮಲಗಿಕೊಂಡೇ ಇದ್ದಿದ್ದರಿಂದ ಒಂದಷ್ಟು ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ. ಅವರ ಉಸಿರಾಟ ಕೂಡ ಉತ್ತಮವಾಗಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಅವರು ಆದಷ್ಟು ಬೇಗ ಸಂಕಷ್ಟದಿಂದ ಹೊರಬರಲಿದ್ದಾರೆ ಬೇಗ ಅವರು ಮನೆಗೆ ಮರಳಲಿದ್ದಾರೆ.
ಒಟ್ಟಾರೆ ಎಸ್ಪಿಬಿ ಬೇಗ ಗುಣಮುಖರಾಗಬೇಕು, ಮತ್ತಷ್ಟು ಹಾಡುಗಳನ್ನ ಹಾಡಿ ಎಲ್ಲರ ಮನಸ್ಸನ್ನು ತಣಿಸಬೇಕು.
ಮತ್ತೆ ಬಾಲು ಸುಮಧುರ ಗೀತೆಗಳನ್ನ ಕೇಳಲು ಎಲ್ಲರೂ ಸಿದ್ಧರಾಗಿ.
Super sir. Great news. We all pray for his Speed recovery
ಒಳ್ಳೆಯ ಸುದ್ದಿ ಕೊಟ್ಟಿದೀರ ನಾವೆಲ್ಲ ಅವರು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇವೆ