November 20, 2024

Newsnap Kannada

The World at your finger tips!

lakshman savadi

ಹಿಂದೂಗಳಿಗೆ ಆಗುವ ಅನ್ಯಾಯ ತಡೆಗೆ ಸೂಕ್ತ ಕಾನೂನು – ಡಿಸಿಎಂ ಸವದಿ

Spread the love

ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯ ತಡೆಯಲು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಾಗು ವುದು ಎಂದು ಉಪ ಮುಖ್ಯ ಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಸವದಿ, ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ಅನ್ಯಾಯ ನಿಲ್ಲಬೇಕು ಎಂಬುದೇ ಸರ್ಕಾರ ಉದ್ದೇಶವಾಗಿದೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಅವರನ್ನು ಓಲೈಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ನಾವು ಜೊತೆಯಲ್ಲಿ ಇರುತ್ತೇವೆ:

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಹೈಕೋರ್ಟ್ ತೀರ್ಪನ್ನು ನಾವು ಗೌರವಿಸಬೇಕು. ಅವರ ಪರವಾಗಿ ನಾವಿದ್ದು, ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಪಡೆಯಲು ಪ್ರಯತ್ನಿಸುತ್ತೇವೆ ಎಂದರು.

ವೈಯಕ್ತಿಕ ಗೆಳೆತನದಿಂದಾಗಿ ಸಚಿವ ರಮೇಶ್ ಜಾರಕಿಹೊಳಿ ಯೋಗೇಶ್ವರ್ ಪರ ಲಾಬಿ ಮಾಡುತ್ತಿದ್ದಾರೆ. ಇದನ್ನು ತಪ್ಪು ಎಂದು ತಿಳಿಯಬೇಕಾಗಿಲ್ಲ ಎಂದ ಉಪಮುಖ್ಯಮಂತ್ರಿಗಳು, ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂಬ ನಿಲುವು ಹೊಂದಿರುವ ಶಾಸಕ ರೇಣುಕಾಚಾರ್ಯ ಅವರೊಂದಿಗೆ ಮಾತನಾಡುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿ ಒಂದು ಕುಟುಂಬವಿದ್ದಂತೆ. ಇಲ್ಲಿ ಒಳಗಿನವರು, ಹೊರಗಿನವರು ಎಂಬುದಿಲ್ಲ. ನಾವೆಲ್ಲ ಒಂದೇ ಎಂದು ಹೇಳುವ ಮೂಲಕ ಪಕ್ಷದಲ್ಲಿ ಬಣ ರಾಜಕೀಯ ಇಲ್ಲ ಎಂದರು.

ಈ ತಿಂಗಳ ೫ ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಸಂದರ್ಭದಲ್ಲಿ ಯಾವ ವಿಭಾಗದ ಬಸ್ ಸಂಚಾರವನ್ನು ನಿಲ್ಲಿಸಲಾಗುವುದಿಲ್ಲ. ಪ್ರತಿಭಟನೆ ವೇಳೆ ಯಾರಾದರೂ ಬಸ್‌ಗಳಿಗೆ ಹಾನಿ ಮಾಡಿದರೆ ಅದಕ್ಕೆ ಕಾರಣರಾದವರಿಂದಲೇ ನಷ್ಟ ವಸೂಲಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.



Copyright © All rights reserved Newsnap | Newsever by AF themes.
error: Content is protected !!