March 11, 2026

Newsnap Kannada

The World at your finger tips!

MELU

ಮಕ್ಕಳಿಗೆ ನೇಣು ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

Spread the love

ಇಬ್ಬರು ಮಕ್ಕಳನ್ನು ನೇಣಿಗೆ ಹಾಕಿ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇಲುಕೋಟೆ ಬಳಿಯ ಕುಪ್ಪಳ್ಳಿಯಲ್ಲಿ ಜರುಗಿದೆ

ಪಾಂಡವಪುರ ತಾಲೂಕಿನ ಕುಪ್ಪಳ್ಳಿ ಗ್ರಾಮದ. ಕೃಷ್ಣೇಗೌಡನ ಪತ್ನಿ ನಿವೇದಿತಾ (26) ಎಂಬಾಕೆ, ತಮ್ಮ ಮಕ್ಕಳಾದ ಗಾನವಿ (6), ಉಲ್ಲಾಸ್ (4) ಇಬ್ಬರು ಮಕ್ಕಳೊಡನೆ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ನಲ್ಲಹಳ್ಳಿಯ ನಿವೇದಿತಾರನ್ನು ಕಳೆದ 7 ವರ್ಷಗಳ ಹಿಂದೆ ಕೃಷ್ಣೇಗೌಡ ಎಂಬುವವರ ಜೊತೆ ಮದುವೆ ಮಾಡಲಾಗಿತ್ತು.
ಗಂಡ ಹೆಂಡತಿ ಇಬ್ಬರ ಮಧ್ಯೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ.

error: Content is protected !!