December 29, 2024

Newsnap Kannada

The World at your finger tips!

598c0769 6305 4449 9de0 5c744f7b2ec7

ಮುತ್ತಪ್ಪ ರೈ ಸಿನಿಮಾ: ಮಾಜಿ ಡಾನ್ ಪಾತ್ರದಲ್ಲಿ ನಟಿಸುತ್ತಿರುವುದು ಯಾರು ಗೊತ್ತೆ?

Spread the love

ಮಾಜಿ ಡಾನ್ ಮುತ್ತಪ್ಪ ರೈ ಜೀವನ ಆಧರಿಸಿ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಬಹಳ ದಿನಗಳ ಹಿಂದೆ ಅದ್ಧೂರಿಯಾಗಿ ಆರಂಭಿಸಿದ್ದರು. ಮುತ್ತಪ್ಪ ರೈ ಸಮ್ಮುಖದಲ್ಲಿ ಈ ಚಿತ್ರದ ಮುಹೂರ್ತ ಸಹ ನಡೆದಿತ್ತು. ಆಮೇಲೆ ಈ ಚಿತ್ರ ಮುಂದುವರಿಯಲಿಲ್ಲ.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಕಳೆದ ಮೇ ತಿಂಗಳಲ್ಲಿ ನಿಧನರಾದರು. ಅವರ ನಿಧನದ ಬಳಿಕವೂ ರೈ ಬಯೋಪಿಕ್ ಮತ್ತೆ ಚರ್ಚೆಯಾಯಿತು. ಇದೀಗ, ಡೆಡ್ಲಿ ಸೋಮ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಸಿನಿಮಾ ಆರಂಭಿಸಿದ್ದಾರೆ. ನಿನ್ನೆ ಚಿತ್ರದ ಹೀರೋ ಇಂಟ್ರೊಡಕ್ಷನ್ ದೃಶ್ಯ ಹಾಗೂ ಫೋಟೋಶೂಟ್ ಭರ್ಜರಿಯಾಗಿ ನಡೆದಿದೆ. ಅಷ್ಟಕ್ಕೂ, ತೆರೆಮೇಲೆ ರೈ ಪಾತ್ರದಲ್ಲಿ ನಟಿಸುತ್ತಿರುವುದು ಯಾರು ಗೊತ್ತೆ?

ಡೆಡ್ಲಿ ಸೋಮ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ದೀಕ್ಷಿತ್, ಡಾನ್ ಪಾತ್ರದ ಮೂಲಕ ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ.

ನಿನ್ನ ರಾಮನಗರದ ಶಿಲ್ಪಾಂದರ ರೆಸಾರ್ಟ್‌ನಲ್ಲಿ ಎಂಆರ್ ಚಿತ್ರದ ಹೀರೋ ಇಂಟ್ರೊಡಕ್ಷನ್ ದೃಶ್ಯ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಸಿನಿಮಾ ಫೋಟೋಶೂಟ್ ಸಹ ಮಾಡಲಾಗಿದೆ. ಹೆಲಿಕಾಫ್ಟರ್‌ನಲ್ಲಿ ಹೀರೋ ಬರುವ ನಾಯಕ ಸೀನ್ ಇದಾಗಿತ್ತು.

Copyright © All rights reserved Newsnap | Newsever by AF themes.
error: Content is protected !!