January 10, 2025

Newsnap Kannada

The World at your finger tips!

sarakari

ಸರ್ಕಾರಿ ವಾಹನದ ಮೇಲೆ ಸುಂದರಿಯ ಪೋಟೊ ಶೂಟ್: ಕೇಸ್ ದಾಖಲಾದ ನಂತರ ಪರಾರಿ

Spread the love

ಸರ್ಕಾರಿ ವಾಹನದ ಮೇಲೆ ವಿವಿಧ ಭಂಗಿಯಲ್ಲಿ ಪೋಟೊ ಶೂಟ್ ಮಾಡಿಸಿಕೊಂಡ ಸುಂದರಿ ವಿರುದ್ದ ಈಗ ಕೇಸ್ ದಾಖಲಾಗಿದೆ.

ಯಲ್ಲಾಪುರ ಮಚಿಕೆರೆ ಅರಣ್ಯ ವಿಭಾಗದ ಎಸಿಎಫ್ ಅಧಿಕಾರಿಯ ವಾಹನದ ಮೇಲೆ ಈ ಸುಂದರಿ ಫೋಟೊ ಶೂಟ್ ಮಾಡಿಸಿಕೊಂಡಿರುವ ಪೋಟೋಗಳ ವೈರಲ್ ಆಗಿವೆ. ಜೊತೆಯಲ್ಲಿ ವಿವಾದವೂ ಆಗಿದೆ.

sarakari2

ಅಧಿಕಾರಿಗಳ ಹಾಗೂ ಸಿಬ್ಬಂದಿಯ ಮುಂದೆಯೇ ಈ ಫೋಟೊ ಶೂಟ್ ಸೆಷನ್ಸ್ ನಡೆದಿದೆ. 2017 ರಲ್ಲಿ ಖರೀದಿಸಿದ ವಾಹನದ ಮೇಲೆ ಮಲಗಿ, ಕುಳಿತುಕೊಂಡ ಯುವತಿ ಪೋಟೊ ತೆಗೆಸಿಕೊಂಡಿದ್ದಾಳೆ.

ಸರ್ಕಾರಿ ವಾಹನ ದುರುಪಯೋಗ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹಾಗೆಯೇ ಸರ್ಕಾರಿ ವಾಹನ ಬಳಕೆ ಮಾಡಿಕೊಂಡ ಯುವತಿ ವಿರುದ್ದವೂ ಪ್ರತ್ಯೇಕ ಕೇಸ್ ದಾಖಲಾಗಿದೆ.

ಆದರೆ ಯುವತಿ ಯಾರು , ಎಲ್ಲಿಯವಳು ಎಂಬುದನ್ನು ಪತ್ತೆ ಹಚ್ಚುವ ಮೊದಲ ಆಕೆ ಪರಾರಿಯಾಗಿದ್ದಾಳಂತೆ.

Copyright © All rights reserved Newsnap | Newsever by AF themes.
error: Content is protected !!