ನಾನು, ನನ್ನ ಪತಿ ಅನ್ಯೋನ್ಯವಾಗಿ ದ್ದೇವೆ. ಯಾವುದೇ ವೈಮನಸ್ಸು ಇಲ್ಲ. ಆದರೂ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ತುಂಬಾ ಚೆನ್ನಾಗಿ ಇದ್ದೇವೆ ಎಂದು ಎನ್ .ಆರ್. ಸಂತೋಷ್ ಪತ್ನಿ ಜಾಹ್ನವಿ ಹೇಳಿದ್ದಾರೆ.
ಎಂ ಎಸ್ ರಾಮಯ್ಯ ಆಸ್ಪತ್ರೆ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಜಾಹ್ನವಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ರಾಜಕೀಯ ಕಾರಣಕ್ಕಾಗಿ ಅವರು ತುಂಬಾ ನೊಂದುಕೊಂಡಿದ್ದರು. ಅದರ ಹೊರತಾಗಿ ಬೇರೆ ಏನೂ ಇಲ್ಲ. ನಮ್ಮ ನಡುವೆ ಕಲಹ ಇದೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಬೇಸರದ ಸಂಗತಿ ಎಂದು ಹೇಳಿದರು.
ರಾಜಕೀಯ ಒತ್ತಡಕ್ಕಾಗಿ ಸಂತೋಷ್ ನಿತ್ಯ ನಿದ್ದೆ ಮಾಡಲು ಮಾತ್ರೆ ತೆಗೆದುಕೊಳ್ಳತ್ತಿದ್ದರು. ಅದರಂತೆ ನಿನ್ನೆ ರಾತ್ರಿ ಹೆಚ್ಚು ಮಾತ್ರೆ ತೆಗೆದುಕೊಂಡಿ ದ್ದಾರೆ. ನಾನು ಕೂಡಲೇ ಗಮನಿಸಿ ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ದಾಖಲು ಮಾಡಿದೆವು ಎಂದು ವಿವರಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ , ಬಿಜೆಪಿಯಲ್ಲಿ ತಮ್ಮ ವಿರುದ್ಧ ವಿರೋಧ ವ್ಯಕ್ತವಾದ ನಂತರ ಸಾಕಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಸಂತೋಷ್ ಈಗ ಚೇತರಿಸಿ ಕೊಳ್ಳುತ್ತಿದ್ದಾರೆ . ಐಸಿಯು ವಾರ್ಡಿನಿಂದ ಶಿಪ್ಟ್ ಮಾಡುವ ಸಾಧ್ಯತೆ ಇದೆ. ಮಧ್ಯಾಹ್ನ ವೇಳೆಗೆ ಆಸ್ಪತ್ರೆಯಿಂದಲೇ ಡಿಸ್ ಚಾಜ್೯ ಆಗುವ ಸಾಧ್ಯತೆ ಇದೆ.
ಸದಾಶಿವ ನಗರ ಪೋಲಿಸರು ಆತ್ಮಹತ್ಯೆ ಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು