ಬೆಂಗಳೂರು, ಜನವರಿ 19: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2025ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಕುರಿತಂತೆ ಪ್ರಮುಖ ಮಾಹಿತಿ ಪ್ರಕಟಿಸಿದೆ. ಇತ್ತೀಚೆಗೆ ಸಿಇಟಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ಇದೇ ವೇಳೆ ಕದನ್ ನೋಂದಣಿ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ.
ಪ್ರಮುಖ ದಿನಾಂಕಗಳು ಮತ್ತು ನೋಂದಣಿ ಪ್ರಕ್ರಿಯೆ:
ಕೆಸಿಇಟಿ 2025 ನೋಂದಣಿ ಪ್ರಕ್ರಿಯೆ ಜನವರಿ 23ರಿಂದ ಆರಂಭವಾಗಿ ಫೆಬ್ರವರಿ 21ಕ್ಕೆ ಅಂತ್ಯಗೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು KEA ಅಧಿಕೃತ ಜಾಲತಾಣ kea.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ನೋಂದಣಿ ಮಾಡುವ ವಿಧಾನ:
- KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ:
- kea.kar.nic.in ತಲುಪಿ.
- ಸಿಇಟಿ ಲಿಂಕ್ ಕ್ಲಿಕ್ ಮಾಡು:
- ಮುಖ್ಯ ಪುಟದಲ್ಲಿ “ಕರ್ನಾಟಕ ಸಿಇಟಿ” ಲಿಂಕ್ ಕ್ಲಿಕ್ ಮಾಡಿ.
- ಅಕೌಂಟ್ ರಚನೆ:
- ಹೊಸ ಪುಟದಲ್ಲಿ ಅಕೌಂಟ್ ರಚಿಸಿ.
- ಅರ್ಜಿಯನ್ನು ಭರ್ತಿ ಮಾಡುವುದು:
- ಅಗತ್ಯ ಮಾಹಿತಿ ನೀಡಿ, ಅರ್ಜಿಯನ್ನು ಸರಿಯಾಗಿ ಪೂರೈಸಿ.
- ಅರ್ಜಿಶುಲ್ಕ ಪಾವತಿ:
- ಅರ್ಜಿ ಶುಲ್ಕ ಪಾವತಿಸಿ ಸಬ್ಮಿಟ್ ಮಾಡು.
- ಅರ್ಜಿ ಡೌನ್‌ಲೋಡ್:
- ದೃಢೀಕರಣಗೊಂಡ ಫೈಲ್ ಅನ್ನು ಡೌನ್‌ಲೋಡ್ ಮಾಡಿ, ಭವಿಷ್ಯದ ಅಗತ್ಯಕ್ಕೆ ಪ್ರತಿ ಇಟ್ಟುಕೊಳ್ಳಿ.
ಪರೀಕ್ಷಾ ದಿನಾಂಕಗಳು:
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2025ರ ಏಪ್ರಿಲ್ 16, 17, ಮತ್ತು 18ರಂದು ನಡೆಯಲಿದೆ.
- ಏಪ್ರಿಲ್ 16: ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ
- ಏಪ್ರಿಲ್ 17: ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆ
- ಏಪ್ರಿಲ್ 18: ಕನ್ನಡ ಭಾಷಾ ಪರೀಕ್ಷೆ
ಅಧಿಕೃತ ಘೋಷಣೆ:
ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ಎಲ್ಲಾ ವೃತ್ತಿಪರ ಕೋರ್ಸುಗಳ ಪ್ರವೇಶ ಸಂಬಂಧಿಸಿದ ಪರಿಶೀಲನೆ ಪ್ರಕ್ರಿಯೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಧಾರಿತ ತಂತ್ರಜ್ಞಾನದಿಂದ ಮಾಡಲಾಗುವುದು ಎಂದಿದ್ದಾರೆ.ಇದನ್ನು ಓದಿ –ಗಾಜಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಅಸ್ತು: ಭಾನುವಾರದಿಂದ ಜಾರಿಗೆ
ಹೆಚ್ಚಿನ ಮಾಹಿತಿಗಾಗಿ KEA ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು