December 27, 2024

Newsnap Kannada

The World at your finger tips!

highway , toll , dashpath

ಬೆಂ-ಮೈ ಎಕ್ಸ್‌ಪ್ರೆಸ್‌ – ಮಣಿಪಾಲ್ ಆಸ್ಪತ್ರೆ ಬಳಿ ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಅನುಮತಿ

Spread the love

ಮೈಸೂರು: ಬೆಂಗಳೂರು – ಮೈಸೂರು (Bengaluru – Mysuru) ಹೆದ್ದಾರಿ ಮುಖ್ಯ ರಸ್ತೆಯಲ್ಲಿ ಎರಡು ಕಡೆ ಫ್ಲೈವರ್ ಗಳ ನಿರ್ಮಾಣಕ್ಕೆ 714 ಕೋಟಿ ರೂ.ಗಳ ಅನುಮೋದನೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಮೈಸೂರು-ಬೆಂಗಳೂರು ಹೈವೇಯ ಕೆಂಪೇಗೌಡ ವೃತ್ತದ ಬಳಿ (ಮಣಿಪಾಲ್ ಆಸ್ಪತ್ರೆ ಬಳಿ) ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ಶೀಘ್ರದಲ್ಲೇ ಇದಕ್ಕೆ ಟೆಂಡರ್ ಕರೆಯಲಾಗುವುದು. ಮೈಸೂರು-ಬೆಂಗಳೂರು ಹೈವೇಯಲ್ಲಿ ಬರುವ ಪ್ರಮುಖ ಪಟ್ಟಣಗಳಿಗೆ ಹೋಗಲು 28 ಕಡೆಗಳಲ್ಲಿ ಟೋಲ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಮೈಸೂರಿನಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ‌ ನಡೆಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಾಗಿವೆ. ಈ ಅವಧಿಯಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನಕ್ಕೇರಿದೆ. ಜನರ ಬದುಕನ್ನು ಉತ್ತಮಗೊಳಿಸಲು ಹಲವು ಜನಪರ ಯೋಜನೆಗಳು ಜಾರಿಯಾಗಿವೆ. ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕವೂ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವು ಸಾಧ್ಯವಿಲ್ಲ. ಕೇರಳ ಸರ್ಕಾರ ಕೂಡ ಐದು ಭಾರಿ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡುವಂತೆ ಮನವಿ ಮಾಡಿದ್ದರು. ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದ ವೇಳೆಯೂ ಕೂಡ ರಾತ್ರಿ ಸಂಚಾರ ನಿರ್ಬಂಧ ತೆರವು ಸಾಧ್ಯವಿಲ್ಲ ಎಂದಿದ್ದಾರೆ. ಈಗ ಯಾಕೆ ಈ ರೀತಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಗೊತ್ತಿಲ್ಲ. ಹೈಕೋರ್ಟ್ ಆದೇಶ ಕೂಡ ಇದೆ. ರಾತ್ರಿ ಸಂಚಾರ ನಿರ್ಬಂಧ ತೆರವು ಸಾಧ್ಯವಿಲ್ಲ ಎಂದು ಹೇಳಿದರು. ಬೆಂ-ಮೈ ಎಕ್ಸ್‌ಪ್ರೆಸ್‌ ವೇ – ಸ್ಪೀಡ್ ಹಂಟರ್ ಮೂಲಕ 7 ಲಕ್ಷ ರೂ. ದಂಡ ವಸೂಲಿ

ಶೀಘ್ರವೇ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ:

WhatsApp Image 2024 12 07 at 7.33.41 PM

ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಶೇ.80ರಷ್ಟು ಭೂಮಿ ಕೆಐಡಿಬಿ ವಶಕ್ಕೆ ಪಡೆದಿದ್ದು, ಉಳಿಕೆ 46 ಎಕರೆ ಭಾಕಿಯಿದ್ದು‌ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಉಡಾನ್ ಯೋಜನೆಯಡಿ ವಿಮಾನಗಳ ಹಾರಾಟಕ್ಕೆ ಉತ್ತೇಜ‌ನ‌ ನೀಡಲಾಗುತ್ತಿದೆ. ಎರಡು ಮೂರು ವಿಮಾನಯಾನ ಸಂಸ್ಥೆಗಳ‌ ಜೊತೆ ವಿಮಾನಗಳ ಹಾರಾಟ ಸಂಬಂಧ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ‌ ಶ್ರೀವತ್ಸ, ಬಿಜೆಪಿ ಮಾದ್ಯಮ ವಕ್ತಾರ ಮಹೇಶ್ ರಾಜೇ ಅರಸ್ ಇದ್ದರು.

ರೈತರ ಯಾವ ಉದ್ದೇಶದಿಂದ ಹೋರಾಟ ಮಾಡುತ್ತಿದ್ದಾರೆಂಬುದು ಮುಖ್ಯ.‌ಅವರ ಹೋರಾಟ ನೈಜವಾಗಿದ್ದರೆ ಕೇಂದ್ರವು ಅವರಿಗೆ ಸ್ಪಂದಿಸುವ ಕೆಲಸ ಮಾಡಲಿದೆ. ಯಾಕೆಂದರೆ ಕಳೆದ10 ವರ್ಷದಲ್ಲಿ ಪಿಎಂ‌ ಕಿಸಾನ್ ಯೋಜನೆ ಸೇರಿ ಅನೇಕ ಯೋಜನೆ ನೀಡಿದೆ.

ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yadhuveera Krishnadatta Chamaraja Wodeyar)

Bengaluru – Mysuru Express – Central permission for fly by near Manipal Hospital ಬೆಂ-ಮೈ ಎಕ್ಸ್‌ಪ್ರೆಸ್‌ ಬೆಂ-ಮೈ ಎಕ್ಸ್‌ಪ್ರೆಸ್‌ ಬೆಂ-ಮೈ ಎಕ್ಸ್‌ಪ್ರೆಸ್‌

Copyright © All rights reserved Newsnap | Newsever by AF themes.
error: Content is protected !!