▪️ರಾ ಬನಾನ ಕೋಫ್ತ▪️
▪️ಬೇಕಾದ ಪದಾರ್ಥಗಳು▪️
- ಬಾಳೆಕಾಯಿ 2
- ಈರುಳ್ಳಿ 2
- ಕೊತ್ತಂಬರಿಸೊಪ್ಪು ಸ್ವಲ್ಪ
- ಹಸಿಮೆಣಸಿನಕಾಯಿ 2
- ಕಡಲೇ ಹಿಟ್ಟು 2 ಚಮಚ
- ಅರಿಶಿಣ ಪುಡಿ ಕಾಲ್ ಚಮಚ
- ಖಾರದ ಪುಡಿ ಅರ್ಧ ಚಮಚ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ ಶಾಲು ಫ್ರೈ ಮಾಡಲು
▪️ರುಬ್ಬಲು▪️
- ಟೋಮೋಟೋ 2
- ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಚಮಚ
▪️ಒಗ್ಗರಣೆಗೆ▪️
- ಸಾಸಿವೆ ಅಧ೯ ಚಮಚ
- ಎಣ್ಣೆ 4 ಚಮಚ
- ಒಣಮೆಣಸಿನಕಾಯಿ 1
- ಹಸಿಮೆಣಸಿನಕಾಯಿ 1
- ಈರುಳ್ಳಿ 1
- ಕೊತ್ತಂಬರಿ ಪುಡಿ 1 ಚಮಚ
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಉಪ್ಪು ರುಚಿಗೆ ತಕ್ಕಷ್ಟು
▪️ವಿಧಾನ▪️
ಮೊದಲಿಗೆ 1 ಅಗಲವಾದ ಪಾತ್ರೆಯಲ್ಲಿ 2 ಬಾಳೆಕಾಯಿ ಇಟ್ಟು ಮುಳುಗುವಷ್ಟು ನೀರು ಹಾಕಿ 10 ನಿಮಿಷಗಳ ಕಾಲ ಬೇಯಿಸಿ ಆರಿದ ನಂತರ 1 ಬಟ್ಟಲಿನಲ್ಲಿ ಬಾಳೆಕಾಯಿಯ ಸಿಪ್ಪೆ ತೆಗೆದು ಚನ್ನಾಗಿ ಕಿವಿಚಿ ಅದಕ್ಕೆ ಕಡಲೇ ಹಿಟ್ಟು ಕಟ್ ಮಾಡಿದ ಈರುಳ್ಳಿ,ಅರಿಶಿಣ ಪುಡಿ,ಖಾರದ ಪುಡಿ ಕೊತ್ತಂಬರಿ ಸೊಪ್ಪು,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
ನಂತರ 1 ಬಾಣಲಿಗೆ 4 ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿದ ನಂತರ ಈರುಳ್ಳಿ ಮೆಣಸಿನಕಾಯಿ,ಕರೀಬೇವು ಕೊತ್ತಂಬರಿ ಪುಡಿ ರುಚಿಗೆ ತಕ್ಕಷ್ಟು ಉಪ್ಪು,ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ ಬಾಡಿಸಿ,ರುಬ್ಬಿಕೊಂಡ ಟೋಮೋಟೋ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಕುದಿಸಿ ಈ ಮಧ್ಯೆ ಶಾಲು ಫ್ರೈ ಮಾಡಿದ ಬಾಳೆಕಾಯಿ ಉಂಡೆಗಳನ್ನು ಈ ಮಿಶ್ರಣಕ್ಕೆ ಸೇರಿಸಿಕೊಂಡು 1 ಸುತ್ತು ಕುದಿಸಿ ಕೈಯಾಡಿಸಿ ಸ್ಟವ್ ನಿಲ್ಲಿಸಿದರೆ,ಚಪಾತಿ,ಅನ್ನ, ರೊಟ್ಟಿ,ಮುದ್ಥೆಯ ಜೊತೆಗೆ ರುಚಿಯಾದ ಬಾಳೆಕಾಯಿ ಕೋಫ್ತ ಸವಿಯಲು ಸಿದ್ಧ.
ಕೆ ವಿಜಯಸುದರ್ಶನ್
ಅರಳುಮಲ್ಲಿಗೆ
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ