ಮಾಜಿ ಗೃಹ ಮಂತ್ರಿ ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ರೇಡ್

Team Newsnap
2 Min Read
  • 11 ಸಿಬಿಐ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಎಲ್ಲಾ ಅಧಿಕಾರಿಗಳು ದೆಹಲಿಯ ಕಚೇರಿಯಿಂದ ಬಂದಿದ್ದಾರೆ.
  • ಮೊಬೈಲ್ ಹಾಗೂ ಮನೆ ಬೀರೂ ಕೀಗಳು ವಶಕ್ಕೆ.

” ಜೈಲಿನಲ್ಲಿ ರಾತ್ರಿ ಕಳೆದ ಅನುಭವ ಭಯಾನಕವಾಗಿತ್ತು. ಸೊಳ್ಳೆ ಕಾಟ, ಒಂದೆ ಚಾಪೆ, ದಿಂಬು ಬೆಟ್ ಶೀಟ್ ಮಾತ್ರ ನೀಡಲಾಗಿತ್ತು.

  • ರಾತ್ರಿ ಸ್ನೇಹಿತರು ತಂದುಕೊಟ್ಟಿದ್ದ ಊಟ ಮಾಡಿದ ಬೇಗ್, ಈಗ ಜೈಲಿನಲ್ಲಿ ನೀಡುವ ಉಪ್ಪಿಟನ್ನೇ ಬೆಳಗಿನ ನಾಷ್ಟ ಎಂದು ತಿಂದಿದ್ದಾರೆ

ಬೆಂಗಳೂರಿನ ಕೋಲ್ಸ್ ಪಾರ್ಕಿನಲ್ಲಿ ರುವ ಮಾಜಿ ಗೃಹ ಸಚಿವ ರೋಷನ್ ಬೇಗ್ ನಿವಾಸದ ಮೇಲೆ ಬೆಳ್ಳಂ ಬೆಳಿಗ್ಗೆ 11 ಜನ ಸಿಬಿಐ ಅಧಿಕಾರಿಗಳ ತಂಡ ದಾಳಿ ಮಾಡಿದೆ.

ಕಳೆದ ರಾತ್ರಿ ಬಂಧನಕ್ಕೆ ಒಳಗಾದ ಬೇಗ್ ಪರಪ್ಪನ ಅಗ್ರಹಾರ ಜೈಲು ಸೇರಿದ ಬೆನ್ನಲ್ಲೇ ಇಂದು ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.

ದೆಹಲಿ ಮೂಲದ ಇಬ್ಬರು ಮಹಿಳಾ ಅಧಿಕಾರಿಗಳೂ ಸೇರಿದಂತೆ 11 ಮಂದಿ ಸಿಬಿಐ ಅಧಿಕಾರಿಗಳ ತಂಡವು, ಐಎಂಎ ಬಹು ಕೋಟಿ ಹಗರಣದಲ್ಲಿ 400 ಕೋಟಿ ರು ಲಂಚ ರೂಪದಲ್ಲಿ ಹಣ ಪಡೆದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದೆ.

ನವೆಂಬರ್ 20 ರಂದು ಐಎಂಎ ವಂಚಕ ಮನ್ಸೂರ್ ಖಾನ್ ನನ್ನು ವಶಕ್ಕೆ ಪಡೆದು ಡ್ರಿಲ್ ಮಾಡಿ ಪ್ರಮುಖ ರಾಜಕಾರಣಿ ಗಳು ವಂಚಕ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿ ನಂತರದ ಬೇಗ್ ಅವರನ್ನು ಬಂಧಿಸಿದ ನಂತರವೇ ಸಿಬಿಐ ರೇಡ್ ಮಾಡಿದೆ.

ಬೆಳಿಗ್ಗೆ 8 ಗಂಟೆಗೆ ಆಗಮಿಸಿ ಬೇಗ್ ಪತ್ನಿ ಸೇರಿದಂತೆ ಮನೆಯಲ್ಲಿ ಇದ್ದವರ ಮೊಬೈಲ್ ಗಳನ್ನು ಪಡೆದುಕೊಂಡು ಮನೆಯಲ್ಲಿರುವ ಎಲ್ಲಾ ಬೀರೂಗಳ ಕೀಗಳನ್ನು ವಶಕ್ಕೆ ತೆಗೆದುಕೊಂಡು ತಡಕಾಟ ಆರಂಭಿಸಿದ್ದಾರೆ.

ಬೇಗ್ ಜೈಲ್ ಹೇಗೆ ಕಳೆದರು?

ನಿನ್ನೆ ರಾತ್ರಿ ಬಂಧನಕ್ಕೆ ಒಳಗಾದ ರೋಷನ್ ಬೇಗ್ ಜೈಲಿನಲ್ಲಿ ಹೇಗೆ ಕಳೆದರು ಎಂಬುದು ಕುತೂಹಲಕಾರಿಯಾಗಿದೆ.
ನಿನ್ನೆ ರಾತ್ರಿ ಸ್ನೇಹಿತರು ಊಟ ತಂದು ಕೊಟ್ಟಿದ್ದಾರೆ. ನಂತರ ಜೈಲಿನಲ್ಲಿ ಕ್ವಾರೆಂಟೈನ್ ಸೆಲ್ ನಲ್ಲಿ ಒಂದು ಚಾಪೆ, ದಿಂಬು, ಬೆಡ್ ಶೀಟ್ ಮಾತ್ರ ನೀಡಲಾಗಿದೆ. ಸೊಳ್ಳೆ ಯ ಕಾಟ ಹೆಚ್ಚಾಗಿದ್ದರಿಂದ ರಾತ್ರಿ 1 ಗಂಟೆಯ ವರೆಗೂ ಬೇಗ್ ಮಲಗಿರಲಿಲ್ಲ. ಇಂದು ಬೆಳಿಗ್ಗೆ 6 ಗಂಟೆಗೆ ಎದ್ದು ಸೆಲ್ ನಲ್ಲೇ ವಾಕ್ ಮುಗಿಸಿದ್ದಾರೆ. ಈ ಬೆಳಗಿನ ತಿಂಡಿ ಉಪ್ಪಿಟ್ಟು ನೀಡಲಾಗಿದೆ ಎಂದು ಜೈಲ್ ಅಧಿಕಾರಿಗಳು ಹೇಳಿದ್ದಾರೆ.

Share This Article
Leave a comment