ಕಥೆ ನೀನಾದರೆ ಪದವು ನಾನಾಗುವೆ
ಕವಿತೆ ನೀನಾದರೆ ಭಾವ ನಾನಾಗುವೆ
ನಿನ್ನೊಲವ ಕಡಲಲ್ಲಿ ಮೀನಾಗುವೆ
ಬಾಳಲ್ಲಿ ಸಂತಸದ ಸುಧೆ ತುಂಬುವೆ.// //
ಒಲವೆಂದೂ ಹೂವಂತೆ ಬಲು ಕೋಮಲ
ಎಲೆ ಮೇಲಿನ ಹನಿಯಂತೆ ಅದು ಶೀತಲ
ಸ್ವಾತಿಮುತ್ತಂತೆ ಎಂದೆಂದೂ ನಿರ್ಮಲ
ಒಲವಿನಲ್ಲಿ ಮಿಂದಾಗ ಮನಕೆ ಬಲ// //
ಹೃದಯ ಬೆರೆತಾಗ ಜೀವನ ರಸದೌತಣ
ಮನಸು ಅರಿತಾಗ ಮಾತೆಲ್ಲ ಸಿಹಿಹೂರಣ
ಗೆಳತಿ ಕಟ್ಟು ಬಾ ಮನೆಗೆ ಹಸಿರ ತೋರಣ
ನಿನ್ನ ನಲಿವಿಂದ ಬಾಳಾಗಲೀ ಶ್ರಾವಣ// //
-ಪದ್ಮನಾಭ. ಡಿ.
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್