ರಾಂಚಿ : ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿ 2017ರ ಕ್ರಿಕೆಟ್ ಅಕಾಡೆಮಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ನ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
2017ರಲ್ಲಿ ದಿವಾಕರ್ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿಯನ್ನು ನಡೆಸಲು ಧೋನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು , ಇದೀಗ ಒಪ್ಪಂದದಲ್ಲಿ ಉಲ್ಲೇಖಿಸಲಾದ ನಿಯಮಗಳಿಗೆ ಬದ್ಧರಾಗಿಲ್ಲ ಎಂದು ಆರೋಪಿಸಿ . ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.
ಆರ್ಕಾ ಸ್ಪೋರ್ಟ್ಸ್ ಒಪ್ಪಂದದ ನಿಯಮಗಳ ಪ್ರಕಾರ ಫ್ರ್ಯಾಂಚೈಸ್ ಶುಲ್ಕವನ್ನ ಪಾವತಿಸಲು ಮತ್ತು ಲಾಭವನ್ನ ಹಂಚಿಕೊಳ್ಳಲು ಬದ್ಧವಾಗಿತ್ತು, ಇದನ್ನು ಗೌರವಸಿಲ್ಲಎಂದು ಆರೋಪಿಸಲಾಗಿದೆ.
ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆಗಸ್ಟ್ 15, 2021 ರಂದು ಧೋನಿ ಸಂಸ್ಥೆಗೆ ನೀಡಲಾದ ಅಧಿಕಾರ ಪತ್ರವನ್ನ ಹಿಂತೆಗೆದುಕೊಳ್ಳಲು ನಿರ್ಧರಿಸಿ ಹಲವಾರು ಕಾನೂನು ನೋಟಿಸ್ ಕಳುಹಿಸಿದ್ದಾರೆ .ಮಂಡ್ಯದ ಮೈಷುಗರ್ ನಲ್ಲಿ 121 ಕೋಟಿ ಅವ್ಯವಹಾರ
ಧೋನಿಯನ್ನು ಪ್ರತಿನಿಧಿಸುತ್ತಿರುವ ದಯಾನಂದ್ ಸಿಂಗ್ ಅವರು ಅರ್ಕಾ ಸ್ಪೋರ್ಟ್ಸ್ ನಿಂದ ವಂಚನೆಗೊಳಗಾಗಿದ್ದೇವೆ,, ಇದರಿಂದಾಗಿ 15 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಹೇಳಿದರು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ