November 16, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ -20-ದಕ್ಷಿಣ ಕನ್ನಡ

Spread the love

ಕಲಾವತಿ ಪ್ರಕಾಶ್
ಬೆಂಗಳೂರು


ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ
ಒಳಗೊಂಡಿದೆ ಒಟ್ಟು ಏಳು ತಾಲೂಕುಗಳಿದು
ಬೆಳ್ತಂಗಡಿ ಬಂಟವಾಳ ಹಾಗೂ ಪುತ್ತೂರು
ಮೂಡಬಿದಿರೆ ಸೂಳ್ಯ ಕಡಬ ಮಂಗಳೂರು

ಉತ್ತರ ಮತ್ತು ದಕ್ಷಿಣ ಕನ್ನಡದ ಹೆಸರು ಕೆನರಾ ಇತ್ತು
ದಕ್ಷಿಣ ಕನ್ನಡಕ್ಕೆ ಸೌತ್ ಕೆನರಾ ಎಂದು ಕರೆಯಲಾಗಿತ್ತು
ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯಕೆ ಸೇರಿತು
ಪಶ್ಚಿಮ ಘಟ್ಟದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆ ಆಯ್ತು

ತೆಂಗು ಭತ್ತ ಬೆಳೆ ಮೀನುಗಾರಿಕೆ ಇಲ್ಲಿ ಜನರ ಕಸುಬಿದೆ ಅಭಿವೃದ್ಧಿ ಹೊಂದಿದ ಮಂಗಳೂರೇ ಜಿಲ್ಲಾ ಕೇಂದ್ರವಿದೆ
ದೇಶದಲ್ಲೇ ಬೃಹತ್ ೭ಬಂದರು ವಿಮಾನ ನಿಲ್ದಾಣವಿದೆ
ಇದು “ಬುದ್ಧಿವಂತರ ಜಿಲ್ಲೆ” ಎಂಬ ಬಿರುದು ಪಡೆದಿದೆ

ಪಶ್ಚಿಮ ಘಟ್ಟದ ರಮಣೀಯವಾದ ಗುಡ್ಡ ಬೆಟ್ಟಗಳು
ಬಯಲು ಸೀಮೆ ಮತ್ತು ನಿತ್ಯ ಹರಿದ್ವರ್ಣದ ಕಾಡುಗಳು
ಸಂಜೆ ವೇಳೆ ಸೂರ್ಯನು ಸಾಮುದ್ರವನ್ನು ತನ್ನಯ
ಅಂತರಂಗದಲ್ಲಿ ಅದುಮಿಟ್ಟಹಾಗೆ ಗೊಚರಿಸುವುದು

ತುಳು ಭಾಷೆ ಮಾತನಾಡುವ ಜನ ಹೆಚ್ಚಾಗಿಹರಿಲ್ಲಿ
ಕನ್ನಡವಲ್ಲದೆ ಕೊಂಕಣಿ ಅರೆಬಾಸೆ ಬ್ಯಾರಿ ಭಾಷೆಗಳು
ಹವ್ಯಕ ಕನ್ನಡ ಕುಂದಾಪುರ ಕನ್ನಡ ಇತರೆ ಭಾಷೆಗಳು
ತುಳು ಮಾತಾಡೊದು ತೆಂಕು ಕಾಸರಗೋಡು ಬಡಗು

ಯಕ್ಷಗಾನ ಹುಲಿವೇಷ ನಾಗಮಂಡಲ ಕಂಬಳಗಳು
ಭೂತಕೋಲ/ಭೂತಾರಾಧನೆ ಕಲೆ ಮತ್ತು ಹಬ್ಬಗಳು
ಮಾನಸ ಅಮ್ಯೂಸೆಂಟ್ಪಾರ್ಕ್ ಕುಮಾರ ಪರ್ವತ
ಜಟ್ಸ್ಕೈಸವಾರಿ ಬಾಳೆಹಣ್ಣು ದೋಣಿ ಸವಾರಿ ಅಟಗಳು

ಪನಂಬೂರು ಬೀಚ್ ಸೋಮೇಶ್ವರ ಬೀಚ್ ಗಳು
ತಣ್ಣೀರು ಬಾವಿ ಬೀಚ್ ಉಳ್ಳಾಲ ಬೀಚ್ ಗಳು
ಪಲಿಕುಲಾ ನಿಸರ್ಗ ಧಾಮ ಬೇಂದ್ರೆ ತೀರ್ಥಗಳು
ಕರ್ನಾಟಕದ ಏಕೈಕ ಬಿಸಿ ನೀರ ಬುಗ್ಗೆ ಇಲ್ಲಿಹುದು

ಗೋಲಿಬಜೆ ಪತ್ರೊಡೆ ನೀರ್ ದೋಸೆ ಬನಾನ ಬನ್
ಮಂಗಳೂರು ಮೀನ್ ಕರಿ ಗಂಜಿ ಊಟ ಕಡುಬು ಸುಲ್ತಾನ ಬ್ಯಾಟರಿ ಉಲ್ಲಾಳದ ಅರಮನೆ ಕೋಟೆ
ವೈಟ್ ಹೌಸ್ ಹಿಲ್ ಹಾಗೂ ಜಮಾದಾಬಾದ್ ಕೊಟೆ

ಕಟೀಲು ದುರ್ಗಾ ಪರಮೇಶ್ವರಿ ಕದ್ರಿ ಮಂಜುನಾಥೇಶ್ವರ
ಮಂಗಳಾದೇವಿ ದೇವಸ್ಥಾನ ಪೊಳಲಿರಾಜರಾಜೇಶ್ವರಿ
ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ
ವೆಂಕಟರಮಣ ಸ್ವಾಮಿ ಮಹಾಲಿಂಗೇಶ್ವರ ಆಲಯ

ಕುಕ್ಕೆಯ ಸುಬ್ರಹ್ಮಣ್ಯ ವೇಣೂರು ಬಾಹುಬಲಿ ಅಲ್ಲದೆ
ಸೌತಡ್ಕ ಗಣಪತಿ ಸಾವಿರ ಕಂಬದ ಬಸದಿ ಜೈನಕಾಶಿ
ಉಲ್ಲಾಳದ ಮದನಿ ದರ್ಗಾ ಶಿಶು ಜೀಸಸ್ ದೇಗುಲ
ಮಿಲಾಗ್ರೇಸ್ ಚರ್ಚ್ ಪ್ರೇಕ್ಷಣೀಯ ಸ್ಥಳಗಳಿಹವಿಲ್ಲಿ

ಶಿವರಾಮ ಕಾರಂತರು ಪಂಜೆ ಮಂಗೇಶರಾಯರು
ಗಂಗಾಧರ ಮಡಿವಾಳೇಶ್ವರ ಎಂ ಎಸ್ ಪುಟ್ಟಣ್ಣರು
ಹರ್ಡೇಕರ ಮಂಜಪ್ಪ ಕರ್ನಾಟಕದ ಗಾಂಧಿ ಎನ್ನುವರು
ಶಬ್ದಮಣಿ ದರ್ಪಣ ಬಾಲಬೋಧೆ ಬರೆದ ಲೇಖಕರು


Copyright © All rights reserved Newsnap | Newsever by AF themes.
error: Content is protected !!