December 25, 2024

Newsnap Kannada

The World at your finger tips!

Map karnataka flag

ಕರುನಾಡ ಜಿಲ್ಲೆಗಳ ಕಿರು ಪರಿಚಯ – 9 – ಕೊಪ್ಪಳ

Spread the love

ಕಲಾವತಿ ಪ್ರಕಾಶ್
ಬೆಂಗಳೂರು.

ಶಿಲಾಯುಗದ ಆದಿ ಮಾನವನ ನೆಲೆಗಳಿರುವುದಿಲ್ಲಿ
ಇಂದಿಗೂ ಕುರುಹುಗಳು ಕೊಪ್ಪಳದ ಬೆಟ್ಟಗಳಲ್ಲುಂಟು
ಹಿರೇಬೆಣಕಲ್ಲು ಚಿಕ್ಕ ಬೆಣಕಲ್ಲು ಕೆರೆಹಾಳಗಳಲ್ಲಿ
ಶಿಲಾಯುಗದ ಆಯಧ ಮಡಿಕೆ ಪಳಿಯುಳಿಕೆ ಉಂಟು

ಗವಿಮಠ,ಮಳಿಮಲ್ಲಪ್ಪನ ಬೆಟ್ಟದ ಗೋಡೆಗಳ ಮೇಲೆ
ಹುಲಿ ಜಿಂಕೆ ಟಗರುಗಳ ವರ್ಣ ಚಿತ್ರಗಳಿರುವುದು
ಕೊಪ್ಪಳದ ಬೆಟ್ಟಗಳಲ್ಲಿ ಇತಿಹಾಸ ಪೂರ್ವದ್ದು
ನಿವೇಶನ, ಶಿಲಾ ಸಮಾಧಿ ಇಂದಿಗೂ ಕಾಣಬಹುದು

ರಾಮಾಯಣದ ಅನೇಕ ಘಟನೆಗಳ
ಅನೇಕ ಕುರುಹುಗಳು ಕಿಷ್ಕಿಂದೆಯಲುಂಟು
ಅನೆಗುಂದಿಯಲಿ ಋಷ್ಯ ಮೂಕ ಪರ್ವತವುಂಟು
ವೀರಹನುಮಂತನ ಜನ್ಮ ಸ್ಥಳವೂ ಇಲ್ಲುಂಟು

ಸರೋವರದ ಬಳಿ ಪಾರ್ವತಿ ತಪಗೈದಳು ಶಿವನಿಗಾಗಿ
ಶಬರಿಯೂ ಕಾಣಲು ಕಾದಿದ್ದಳಲ್ಲೇ ರಾಮನಿಗಾಗಿ
ಇಂದ್ರನೀಲ ಪರ್ವತದಿ ತಪಗೈದ ಅರ್ಜುನ ಶಿವನಿಗಾಗಿ
ಪಂಪೆಬಳಿ ಪಾಶುಪತಾಸ್ತ್ರ ನೀಡಿದ ಶಿವ ಪ್ರತ್ಯಕ್ಷನಾಗಿ

ಮಹಾಭಾರತಕೂ ನಂಟುಂಟು ಕೊಪ್ಪಳ ಬೆಟ್ಟಕ್ಕೆ
ಪಾಂಡವರಲ್ಲಿ ವಾಸವಿದ್ದರೆಂಬ ನಂಬಿಕೆ ಆ ಸ್ಥಳಕೆ
ಗವಿಮಠದ ಬೆಟ್ಟ ಮಳಿಮಲ್ಲಪ್ಪನ ಬೆಟ್ಟದ ನಡುವಿನ
ಜಾಗ ಈಗಲೂ ಕರೆವರು ಪಾಂಡವರ ವಠಾರವೆಂದದಕೆ

ಗವಿಮಠ ಮಳಿಮಲ್ಲಪ್ಪನ ಬೆಟ್ಟದಲ್ಲಿವೆ ಶಾಸನಗಳು
ಚಕ್ರವರ್ತಿ ಅಶೋಕ ಬರೆಸಿರುವಂಥ ಪುರಾವೆಗಳು
ಆ ಕಾಲದ ಮೋರಿಯರ ಅಂಗಡಿಗಳೆಂಬ ಹಾಸುಗಲ್ಲಿನ ಕಟ್ಟಡ ನೀಡುವ ಮೌರ್ಯರ ವ್ಯವಹಾರ ಸುಳಿವುಗಳು

ಸುವರ್ಣ ಗಿರಿಯೇ ಕನಕಗಿರಿಯೆಂಬ ಅಭಿಪ್ರಾಯಗಳು
ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ನಮೂದಿಸಿದ ವಿಷಯ
ಉತ್ತರ ದಕ್ಷಿಣ ಭಾರತದ ವ್ಯವಹಾರ ಕುರಿತ ವಿಷಯ
ವ್ಯವಸ್ಥಿತ ಬದುಕಿಲ್ಲಿ ರೂಪುಗೊಂಡಿದ್ದ ಮಾತುಗಳು

ಚಂದ್ರಗುಪ್ತನ ಒಲವಿಂದ ಜೈನ ಧರ್ಮ ಬೆಳೆಯಿತು
ಆಗ ಈ ಪ್ರದೇಶ ಜೈನಕಾಶಿಯೆಂಬ ಹೆಸರು ಪಡೆಯಿತು
ರಾಜನೆತನಗಳಿಗೆ ಇದುವೇ ತೀರ್ಥಯಾತ್ರಾಕ್ಷೇತ್ರವೆಂದು
ನಂಬಿದ್ದ ರವರು ಇಲ್ಲಿಯೇ ಮುಕ್ತಿಯ ಧಾಮವೆಂದು

ಜೈನರ ಕಾಲದೊಳು777 ಬಸದಿಗಳಿದ್ದವೆಂದು
ಕೆತ್ತಿಸಲಾಗಿದೆ ಶ್ರವಣ ಬೆಳಗೊಳದ ಶಾಸನದೊಳಂದು
ಶೈವರ ದೇವರದಾಸಿಮಯ್ಯ ಜೈನರ ನಡುವಿನ ವಾದದಿ ಗೆದ್ದು ಜಯಪತ್ರ ಪಡೆದವ ದಾಸಿಮಯ್ಯನೆಂದಿಹುದು

ನಂತರ ಆಳಲು ಬಂದ ಶಾತವಾಹನರು ಕನ್ನಡದವರು
ಮೊದಲ ಚಕ್ರವರ್ತಿಯೇ ಮಯೂರ ವರ್ಮರು
ಕನ್ನಡವನ್ನೇ ಆಡಳಿತದ ಭಾಷೆ ಮಾಡಿಕೊಂಡವರು
ಕನ್ನಡದ ಲಿಪಿಯಲ್ಲೂ ಸುಧಾರಣೆಯನ್ನು ತಂದವರು

ಆಸ್ಥಾನದಲ್ಲಿ ಕವಿಗಳಿಗೆಲ್ಲ ಆಶ್ರಯವಿತ್ತವರು
ಆಶ್ರಯ ಪಡೆದ ಕವಿಗಳು ಉನ್ನತ ಕಾವ್ಯವ ರಚಿಸಿದರು
ಶಾತವಾಹನರು ಕಟ್ಟಿದ ಕೆರೆಗಳು ಕೊಟ್ಟ ದಾನಗಳು
ಬಿಟ್ಟು ಕೊಟ್ಟಿದ್ದ ದತ್ತಿಯ ಬಗ್ಗೆ ಸಾರುತಿವೆ ಶಾಸನಗಳು

ಶಾತವಾಹನರ ದೇವಾಲಯಗಳು ಪೂಜೆಗಾಗಿ ಇರದೆ
ನಾಡಿನ ನಾಡಿಯ ಹಿಡಿದು ಮುನ್ನಡೆಸಲೆಂದೆ ಸಂಸ್ಕೃತಿ ಅಧ್ಯಾತ್ಮದ ಕೇಂದ್ರಗಳಾಗಿದ್ದು ಪ್ರಜೆಗಳ ಒಳಿತಲ್ಲದೆ
ಕ್ಷೇಮಕ್ಕಾಗಿಯೂ ಪೂಜಿಸುವ ದೇವಾಲಯಗಳನತಿ

ಅದ್ಭುತ ಕಲೆಯ ಮಹಾದೇವನ ಗುಡಿಯನು ಕಟ್ಟಿದರು
ದೇವಾಲಯಗಳ ಚಕ್ರವರ್ತಿ ಎಂದು ಇದನ್ನು ಕರೆದರು
ವಾರಣಾಸಿಯಿಂದಾಗಮಿಸಿ ರುದ್ರಮುನಿ ಆಚಾರ್ಯರು
ಇಂದಿನ ಗವಿಮಠ ಎಂಬಲ್ಲಿಯೇ ತಪವನು ಗೈದರು

ಕೊಪ್ಪಳದಲ್ಲಿವೆ ಅನೇಕ ಪ್ರಸಿದ್ಧ ದೇವಾಲಯಗಳು ಕೋಟಿಲಿಂಗಗಳ ಸೋಮನಾಥೇಶ್ವರ ಜೈನಬಸದಿಗಳು
ವ್ಯಾಸರಾಯರ ಹೇಮಗುಡ್ಡದ ಶ್ರೀದೇವಿಯ ಆಲಯ ಕಲ್ಲಿನಾಥೇಶ್ವರ ಚಂದಾಲಿಂಗ ಹುಲುಗೆಮ್ಮದೇವಾಲಯ

ಸಾಹಿತಿಗಳು ಸಿದ್ದಯ್ಯ ಪುರಾಣಿಕ,ಬಸವರಾಜ ಸಬರದ
ಕವಿ ರಾಜ ಸಾಹೇಬ, ಪಂಡಿತ್ ಕಲ್ಲಜ್ಜಯ್ಯರು
ರಾಘವೇಂದ್ರ ಇಟಗಿ ಬಿ ಆರ್ ತುಬಕಿ ಪಾಟೀಲರು
ದಾಸಪರಂಪರೆ ಶಾಸ್ತ್ರೀಯ ಸಂಗೀತಕ್ಕೂಇಲ್ಲಿದೆ ಹೆಸರು

Copyright © All rights reserved Newsnap | Newsever by AF themes.
error: Content is protected !!