ಬೆಂಗಳೂರು : ಬೆಂಗಳೂರಲ್ಲಿ ಆದಾಯ ಅಧಿಕಾರಿಗಳು ನಿನ್ನೆ ರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿ ಬರೊಬ್ಬರಿ 23 ಬಾಕ್ಸ್ಗಳಲ್ಲಿ 42 ಕೋಟಿ ರು ಕಂತೆ ಕಂತೆ ಹಣ ನೋಟುಗಳನ್ನು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದಿದ್ದಾರೆ .
ಪ್ಲಾಟ್ ಒಂದರಲ್ಲಿ ಐನೂರು ಮುಖಬೆಲೆಯ 42 ಕೋಟಿ ರು ಹಣವನ್ನು ಕಂಡು ಐಟಿ ಅಧಿಕಾರಿಗಳು ದಂಗಾಗಿದ್ದಾರೆ.
ಬೆಂಗಳೂರಿನ ಆರ್ಟಿ ನಗರದ ಎರಡು ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆತ್ಮಾನಂದ ಕಾಲೋನಿಯಲ್ಲಿರುವ ಫ್ಲಾಟ್ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ.
ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ಮಾಜಿ ಕಾರ್ಪೋರೇಟರ್ ಅಶ್ವತ್ಥಮ್ಮನ ಗಂಡ ಅಂಬಿಕಾಪತಿಗೆ ಸೇರಿದ ಹಣ ಎಂದು ಹೇಳಲಾಗಿದೆ.
ಈ ಪ್ರಮಾಣದ ಹಣವನ್ನು ಕಾರಿನಲ್ಲಿ ಸಾಗಾಟ ಮಾಡಲು ತಯಾರಿ ನಡೆದಿತ್ತು. ಪ್ಲಾಟ್ನಲ್ಲಿ ಕೋಟಿ ಕೋಟಿ ಹಣದ ಬಾಕ್ಸ್ಗಳು ಪತ್ತೆಯಾದ ಬೆನ್ನಲ್ಲೇ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇಷ್ಟೊಂದು ಹಣ ಯಾರಿಗೆ ಸೇರಿದ್ದು? ಆಫ್ಲಾಟ್ ಯಾರದ್ದು ಎಂಬ ಬಗ್ಗೆ ಐಟಿ ಅಧಿಕಾರಿಗಳು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ಒಂದು ವರದಿಗಳ ಪ್ರಕಾರ, ಅಷ್ಟೊಂದು ಹಣವನ್ನು ಕಾರಿನ ಮೂಲಕ ತಮಿಳುನಾಡು ಕಡೆಗೆ ಸಾಗಿಸಲು ಪ್ಲಾನ್ ಮಾಡಿದ್ದರು ಎನ್ನಲಾಗುತ್ತಿದೆ.ಕೃಷಿ ಇಲಾಖೆಯ ಎರಡು ಸಾವಿರ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ – ಸಚಿವ ಚಲುವರಾಯಸ್ವಾಮಿ
ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ