ಮೈಸೂರು ರೈಲ್ವೆ ಕಾರ್ಯಗಾರಕ್ಕೆ ಗಂಟೆಗೆ 160 ಕಿಮಿ ವೇಗದಲ್ಲಿ ಚಲಿಸುವ ಮೆಮೂ ರೈಲು ಚಕ್ರಗಳನ್ನು ತಯಾರಿಸಿದ ಕೀತರ್ಿ ಲಭ್ಯವಾಗಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿಯೇ ಮೊದಲ ಬಾರಿ ಮೈಸೂರಿನ ಕಾರ್ಯಗಾರದಲ್ಲಿ ಇಂತಹ ಮಹತ್ವದ ಸಾಧನೆಯಾಗಿದೆ.
ಮೆಮೂ ರೈಲಿನ ವೇಗಕ್ಕೆ ತಕ್ಕಂತೆ ವಿನ್ಯಾಸ ಮಾಡಿ ಮೂರು ಫೇಸ್ನ ಈ ಕೋಚ್ಸೆಟ್ನಲ್ಲಿ ಬಳಕೆ ಮಾಡಲು ನಿರ್ಧರಿಸಲಾಗಿದೆ. ಹೊಸ ವೀಲ್ಸೆಟ್ಗಳಿಗೆ ಸಂಪ್ರದಾಯಕ ಪೂಜೆ ಸಲ್ಲಿಸಿದ ರೈಲ್ವೆ ಸಿಬ್ಬಂದಿ, ಬೆಮೆಲ್ ಕಳುಹಿಸಲಿದ್ದಾರೆ.
ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ಕುಮಾರ್ ಸಿಂಗ್ ಈ ಕುರಿತಂತೆ ಮಾಹಿತಿ ನೀಡಿ ಕೆಲವು ದಿನಗಳ ಹಿಂದೆ ಬೆಮೆಲ್ ಸಂಸ್ಥೆಯು ಮೈಸೂರು ರೈಲ್ವೆ ಕಾರ್ಯಗಾರಕ್ಕೆ
225 ಟ್ರೈಲರ್ ಕೋಚ್ಕಾರ್ಗೆ 900 ಟ್ರೈಲರ್ ಕೋಚ್ ವಿಲ್ಸೆಟ್ಗಳನ್ನು ಮತ್ತು 75 ಮೋಟರ್ ಕೋಚ್ ಕಾರ್ ಗೆ 300 ಮೋಟರ್ ಕೋಚ್ ವೀಲ್ ಸೆಟ್ ಗಳನ್ನು ತಯಾರಿಸಿಕೊಂಡುವಂತೆ ಬೇಡಿಕೆ ಸಲ್ಲಿಸಿತ್ತು. ದೆಹಲಿ ಮತ್ತು ಘಾಜಿಯಾಬಾದ್ ನಲ್ಲಿ ಚಲಿಸುವ ಮೆಮೋ ರೈಲಿಗೆ ಈ ಚಕ್ರಗಳನ್ನು ಬಳಕೆ ಮಾಡಲಾಗುವುದು ಎಂದರು.
ಈ ಚಕ್ರಗಳಿಗೆ ಅಗತ್ಯವಾಗಿ ಬೇಕಾಗಿರುವ ಕಚ್ಚಾ ವಸ್ತುಗಳನ್ನು ಬೆಮೆಲ್ ತನ್ನ ಖಚರ್ಿನಲ್ಲಿ ಭರಿಸುತ್ತದೆ. ಇದನ್ನು ಬಳಕೆ ಮಾಡಿಕೊಂಡು ಮೈಸೂರು ರೇಲ್ವೆ ಮೆಮೂ ಕೋಚ್ ಗಳ ವೀಲ್ ಗಳನ್ನು ತಯಾರಿಸಲಾಗುವುದು ಎಂದರು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ