ಸರಳ ದಸರಾ ಆಚರಣೆಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯಮಬಾಹಿರವಾಗಿ ಮಂತ್ರಿಗಳಿಗೆ ಕಾರುಗಳನ್ನು ಖರೀದಿಸಬಹುದು, ವಕ್ಫ್ ಹಾಗೂ ಹಜ್ ಭವನಗಳಿಗೆ ಕೋಟಿ ಕೋಟಿ ಅನುದಾನ ಕೊಡಬಹುದು. ಆದರೂ ಹಿಂದೂಗಳ ಹಬ್ಬಗಳು ಮತ್ತು ಉತ್ಸವಗಳು ಮಾತ್ರ ಸರಳವಾಗಿ ಎಂದು ಹೇಳಿದ್ದಾರೆ.
ಬರದ ಹಿನ್ನೆಲೆ ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಅದರ ಜೊತೆ ಹಂಪಿ ಉತ್ಸವವನ್ನು ಕೂಡ ಮುಂದೂಡಿದೆ. ಬೇರೆ ಎಲ್ಲದಕ್ಕೂ ಕೋಟಿ ಕೋಟಿ ಖರ್ಚು,ಹಿಂದೂಗಳ ಹಬ್ಬಗಳು ಹಾಗೂ ಉತ್ಸವಗಳು ಮಾತ್ರ ಸರಳವಾಗಿ ಎಂದು ಸರ್ಕಾರದ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ರೈತಾಪಿ ವರ್ಗವೂ ಸಂಕಷ್ಟದಲ್ಲಿದ್ದು, ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾವನ್ನು ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌ಸಿ ಮಹದೇವಪ್ಪ ಮಾಹಿತಿ ಹಂಚಿಕೊಂಡಿದ್ದರು. ತಮಿಳುನಾಡಿಗೆ ಕಾವೇರಿ ನೀರು – ಪ್ರತಿಭಟನೆಗೆ ಸಾಥ್ ನೀಡಿದ ಚುಂಚಶ್ರೀಗಳು
ಈ ಬಗ್ಗೆ ಟ್ವೀಟ್ ಮಾಡಿರುವ ಯತ್ನಾಳ್, ಈ ಬಾರಿ ಸರಳ ದಸರಾ. ಈ ಬಾರಿ ಹಂಪಿ ಉತ್ಸವ ಇಲ್ಲ ಎಂದು ಸರ್ಕಾರ ನಿರ್ಧರಿಸಿದೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಮಂತ್ರಿ ಮಂಡಲಕ್ಕೆ ಹೊಸ ಕಾರುಗಳ ಖರೀದಿ. ವಕ್ಫ್ ಹಾಗು ಹಾಜ್ ಭವನಗಳಿಗೆ ಕೋಟಿ ಕೋಟಿ ರೂ. ಅನುದಾನ. ರಾಜೀವ್ ಗಾಂಧೀ ಪುತ್ಥಳಿಗಾಗಿ ಕೋಟಿ ಕೋಟಿ ರೂ. ಖರ್ಚು. ಗ್ಯಾರಂಟಿ ಯೋಜನೆ ಕಾರ್ಯಕ್ರಮಗಳಿಗೆ ಕೋಟಿ ಕೋಟಿ ರೂ. ಖರ್ಚು ಮಾಡುತ್ತಿರುವುದನ್ನು ಪ್ರಸ್ತಾಪಿಸಿ, ಹಿಂದೂಗಳ ಹಬ್ಬಗಳು ಹಾಗು ಉತ್ಸವಗಳು ಮಾತ್ರ ಸರಳವಾಗಿ ಎಂದು ಹೇಳಿದ್ದಾರೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು