ಮೈಸೂರು : ಆಟೋ , ಕ್ಯಾಬ್ ಚಾಲಕರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು
ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಶಕ್ತಿ ಯೋಜನೆ ಮಹಿಳೆಯರಿಗೆ ನೀಡಿದ್ದೇವೆ . ಇದನ್ನು ವಿರೋಧ ವ್ಯಕ್ತಪಡಿಸ ಬಾರದು ಅಂತ ತಿಳಿಸಿದರು.
ಶಕ್ತಿ ಯೋಜನೆಯಿಂದಾದ ನಷ್ಟಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಕಾನೂನಾತ್ಮಕವಾಗಿ ಅವರ ಬೇಡಿಕೆ ಏನು ಈಡೇರಿಸಲು ಸಾಧ್ಯ ಈಡೇರಿಸುತ್ತೇವೆ ಸರ್ಕಾರ ಚಾಲಕರ ಪರವಾಗಿ ಇದೇ ಅಂತ ಅವರು ಇದೇ ವೇಳೆ ತಿಳಿಸಿದರು. ಸಿಎಂ ಸಿದ್ದು ವಿರುದ್ಧ ಹರಿಪ್ರಸಾದ್ ಹೇಳಿಕೆ ಬಗ್ಗೆ ಪಕ್ಷ ನಿಗಾ : ಸಚಿವ ಎಂ ಬಿ ಪಾಟೀಲ
ಉದ್ದೇಶ ಪೂರಕವಾಗಿ ನೀರು ಬಿಟ್ಟಿಲ್ಲ :
ಕಾವೇರಿ ನದಿ ನೀರನ್ನು ಉದ್ದೇಶಪೂರಕವಾಗಿ ತಮಿಳುನಾಡಿಗೆ ಬಿಟ್ಟಿಲ್ಲ, ಕಾವೇರಿ ನದಿ ನೀರು ಪ್ರಾಧಿಕಾರದ ನಿರ್ದೇಶನದ ಮೇರೆಗೆ ನೀರು ಬಿಟ್ಟಿದ್ದೀವಿ ಎಂದರು
ಮಳೆಯ ವಸ್ತು ಪರಿಸ್ಥಿತಿಯನ್ನು ಸುಪ್ರಿಂಕೋರ್ಟ್ ಗಮನಕ್ಕೆ ತರುವ ಬಗ್ಗೆ ನಮ್ಮ ವಕೀಲರ ಜೊತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಮೈಸೂರಿನಲ್ಲಿ ಸೆ.15ರಂದು ಸಂವಿಧಾನ ಓದು ಕಾರ್ಯಕ್ರಮ – ಡಿಸಿ ಡಾ ಕೆ.ವಿ.ರಾಜೇಂದ್ರ
ತಮಿಳುನಾಡು ವಿನಾಕಾರಣ ಖ್ಯಾತೆ ತೆಗೆದಿದೆ. 21 ರಂದು ಕೋರ್ಟ್ ನಲ್ಲಿ ನಮ್ಮ ಸಂಕಷ್ಟ ವಿವವರಿಸುತ್ತೇವೆ.ಬಿಜೆಪಿ ಇದರಲ್ಲಿ ರಾಜಕಾರಣ ಮಾಡಲ್ಲ ಅಂತ ಹೇಳಿ ರಾಜಕಾರಣ ಮಾಡುತ್ತಿದ್ದಾರೆ. ಪ್ರಧಾನಿ ಬಳಿ ನಿಯೋಗ ಹೋಗಲು ಸಿದ್ದರಿದ್ದೆವು. ನಮಗು ಪ್ರಧಾನಿ ಭೇಟಿಗೆ ದಿನಾಂಕ ಸಿಗುತ್ತಿಲ್ಲ. ಬಿಜೆಪಿಯವರಾದರೂ ಹೋಗಿ ಕೇಳಲಿ ಎಂದರೆ ಅವರು ಕೇಳುತ್ತಿಲ್ಲ.ಇಲ್ಲಿ ಕುಳಿತು ಹೋರಾಟದ ಕಥೆ ಹೇಳುತ್ತಿದ್ದಾರೆ. ನಾವು ರೈತರ ರಕ್ಷಣೆಗೆ ಈಗಲೂ ಬದ್ದ ಎಂದರು
ಸಿಎಂ ಸಿದ್ದರಾಮಯ್ಯ
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು