ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾಜಿ ಮೇಯರ್ ಸಂಪತ್ ರಾಜ್ ಸ್ವಲ್ಪ ದರಲ್ಲೇ ಎಸ್ಕೇಪ್ ಅಗಿದ್ದಾರೆ.
ಆದರೆ ಸಂಪತ್ ರಾಜ್ ಹಾಗೂ ಇತರ ಆರೋಪಿಗಳಿಗೆ ಕೆಲ ದಿನ ಆಶ್ರಯ ನೀಡಿದ್ದ ಆರೋಪದಡಿ ಬಿಬಿಎಂಪಿ ಗುತ್ತಿಗೆದಾರ ರಿಯಾಜುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಿಯಾಜುದ್ದೀನ್, ಪ್ರಕರಣದ ಆರೋಪಿಯಾದ ಮಾಜಿ ಮೇಯರ್ ಆರ್. ಸಂಪತ್‌ರಾಜ್ ಹಾಗೂ ಮಾಜಿ ಕಾರ್ಪೋರೇಟರ್ ಜಾಕೀರ್ ಸ್ನೇಹಿತ. ಇದೀಗ ಸಂಪತ್ ರಾಜ್ ಹಾಗೂ ಜಾಕೀರ್ ಇಬ್ಬರೂ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ.
‘ಆರೋಪಿಗಳು ಪರಾರಿಯಾಗಲು ರಿಯಾಜುದ್ದೀನ್ ಸಹಾಯ ಮಾಡಿದ್ದ. ತನ್ನ ಕಾರಿನಲ್ಲಿ ಆರೋಪಿಗಳನ್ನು ನಾಗರಹೊಳೆ ಬಳಿ ಇರುವ ಫಾರ್ಮ್ ಹೌಸ್‌ಗೆ ಕರೆದೊಯ್ದಿದ್ದ. ಅಲ್ಲಿಯೇ ಆರೋಪಿಗಳು ಕೆಲ ದಿನ ಉಳಿದುಕೊಂಡಿದ್ದರು. ನಂತರ, ಅಲ್ಲಿಂದ ಬೇರೆಡೆ ಆರೋಪಿಗಳು ಹೊರಟು ಹೋಗಿದ್ದಾರೆ’ ಎಂದು ಸಿಸಿಬಿ ಜಂಟಿ ಕಮೀಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.
ರಿಯಾಜುದ್ದೀನ್‌ನನ್ನು ಬಂಧಿಸಿ ಹೇಳಿಕೆ ಪಡೆಯಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸಂಪತ್ ರಾಜ್ ಬಂಧನಕ್ಕೂ ಬಲೆ ಬೀಸಲಾಗಿದೆ’ ಎಂದೂ ಹೇಳಿದ್ದಾರೆ.
- ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
- ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
More Stories
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು