November 22, 2024

Newsnap Kannada

The World at your finger tips!

vidhana soudha

ರೈತರ ಪ್ರತಿಭಟನೆಗೆ ಕ್ಯಾರೆ ಎನ್ನದ ಸರ್ಕಾರ : ಇಂದೂ ಸಹ 13 ಸಾವಿರ ಕ್ಯುಸೆಕ್ ನೀರು ತ. ನಾಡಿಗೆ

Spread the love

ಮಂಡ್ಯ : ಕೋರ್ಟ್ ಆದೇಶಕ್ಕೂ‌ ಮೊದಲೇ ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಬಿಡುತ್ತಿರುವ ಹೆಚ್ಚಳವಾಗಿದೆ

ಕಾವೇರಿ ಕೊಳ್ಳದ ರೈತರು ನೀರು ಬಿಡಬೇಡಿ ಎಂದು ಕೂಗಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ತಮಿಳುನಾಡಿಗೆ ನೀರನ್ನು ಹರಿಸುತ್ತಿದೆ. INS ವಿಂದ್ಯಾಗಿರಿ – ಭಾರತದ ನೌಕಾಪಡೆಯ ಶಕ್ತಿಯನ್ನು ಹೆಚ್ಚಿಸುವ ಹಡಗು | INS Vindhyagiri

ನಿನ್ನೆ 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. ಇಂದು ಡ್ಯಾಂನಿಂದ ತಮಿಳುನಾಡಿಗೆ 13,145 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ನಿನ್ನೆಯಷ್ಟೇ ಕೆಆರ್‌ಎಸ್‌ನಲ್ಲಿ ರೈತ ಸಂಘಟನೆ ಪ್ರತಿಭಟನೆ ನಡೆಸಿತ್ತು. ತಮಿಳುನಾಡಿಗೆ ನೀರು ಬಿಡುತ್ತಿರೋದನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದರು.

dam,rain,water
KRS

ತಮಿಳು ನಾಡಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ನೀರಿನ ಮಟ್ಟ ದಿನೇ ದಿನೆ ಇಳಿಕೆ ಆಗುತ್ತಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 108.86 ಅಡಿ ನೀರು ಸಂಗ್ರಹ ಆಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 30.590 ಟಿಎಂಸಿ ನೀರು ಇದೆ.

ಆಣೆಕಟ್ಟೆಯ ನೀರಿನ ಮಟ್ಟ:

  • ಗರಿಷ್ಠ ಮಟ್ಟ: 124.80 ಅಡಿಗಳು
  • ಇಂದಿನ ಮಟ್ಟ: 108.86 ಅಡಿಗಳು
  • ಗರಿಷ್ಠ ಸಾಂದ್ರತೆ: 49.452 ಟಿಎಂಸಿ
  • ಇಂದಿನ ಸಾಂದ್ರತೆ: 30.590 ಟಿಎಂಸಿ
  • ಒಳ ಹರಿವು: 2219 ಕ್ಯೂಸೆಕ್
  • ಹೊರ ಹರಿವು: 15,611 ಕ್ಯೂಸೆಕ್

ರೈತರ ಪ್ರತಿಭಟನೆಗೆ ಕ್ಯಾರೆ ಎನ್ನದ ಸರ್ಕಾರ : ಇಂದೂ ಸಹ 13 ಸಾವಿರ ಕ್ಯುಸೆಕ್ ನೀರು ತ. ನಾಡಿಗೆ – The government called care for farmers’ protest: 13 thousand cusecs of water will be supplied today. pulse #mandya #mandyanews #kannadanews #karnatakanews #indianews

Copyright © All rights reserved Newsnap | Newsever by AF themes.
error: Content is protected !!