November 19, 2024

Newsnap Kannada

The World at your finger tips!

pataki1

photo credits: Shree Ram

ಪಟಾಕಿ ಶಬ್ಧವಿಲ್ಲ , ಅಬ್ಬರವಿಲ್ಲ: ನಿಶಬ್ಧದಲ್ಲೇ ಆರಂಭವಾದ ಬೆಳಕಿನ ಹಬ್ಬ ದೀಪಾವಳಿ

Spread the love

ಬೆಳಕಿನ ಹಬ್ಬ ದೀಪಾವಳಿ ಈ ಬಾರಿ ಪಟಾಕಿ ನಿಷೇಧದಿಂದಾಗಿ ನಿಶಬ್ಧ ದೀಪಾವಳಿ ಎಂಬಂತಾಗಿದೆ.
ಪಟಾಕಿಯ ಅಬ್ಬರ, ಕರ್ಕಶವಾದ ಶಬ್ದಕ್ಕೆ ಕಡಿವಾಣ ಬಿದ್ದಿದೆ. ದೀಪಾವಳಿ ಬೆಳಗುವ ಹಣತೆಯ ಬೆಳಕಿನ ಹಬ್ಬ. ಕೊರೋನಾ ಭಯ, ಭೀತಿಯಿಂದಾಗಿ ಮುಂಜಾಗ್ರತ ಕ್ರಮ ಕೈಗೊಂಡ ಸರ್ಕಾರ ಪಟಾಕಿ ಸಿಡಿಸುವುದರಿಂದ ಆಗುವ ಪರಿಣಾಮಗಳನ್ನು ಚಿಂತನೆ ಮಾಡಿ ಪಟಾಕಿ ಹೊಡೆಯುವುದನ್ನೇ ನಿಷೇಧ ಮಾಡಿರುವುದು ಒಳ್ಳೆಯದೇ ಆದರೂ, ಸಂಪ್ರದಾಯವಾಗಿ ಬಂದಿದ್ದ ಪಟಾಕಿ ಸಂಭ್ರಮವು ಈ ಬಾರಿ ಮೌನಕ್ಕೆ ಜಾರಿದಂತಾಗಿದೆ.

ನಾಡಿನೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಹೆಚ್ಚಿನ ಬೆಳಕು ಕಡಿಮೆ ಶಬ್ದದೊಂದಿಗೆ ಶನಿವಾರ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ರಾಜ್ಯ ಸರ್ಕಾರದ ನಿರ್ದೇಶನದಂತೆ ಹಸಿರು ಪಟಾಕಿ ಬಳಕೆ ಮಾಡಬೇಕಾಗಿತ್ತು. ಆದರೆ ಹಸಿರು ಪಟಾಕಿ ಯಾವುದು ? ಅದರಿಂದ ಯಾವ ಪ್ರಮಾಣದ ಪರಸರ ಮಾಲಿನ್ಯ ಉಂಟಾಗುತ್ತದೆ ಎಂಬುದು ನಿರ್ಧಾರ ಆಗದೇ ಗೊಂದಲ ದಲ್ಲಿ ಹಬ್ಬದ ಮೊದಲ ದಿನ ಅಂತ್ಯ ವಾಯಿತು.

ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾಹಾ ನಗರ ಪಾಲಿಕೆ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳ ತಂಡವು ಪಟಾಕಿ ಅಂಗಡಿಗಳ ಮೇಲೆ ದಾಳಿ ಡಂ ಢಮಾರ್ ಪಟಾಕಿ ಗಳನ್ನು ವಶಪಡಿಸಿಕೊಂಡ ಪ್ರಕರಣಗಳು ವರದಿಯಾಗಿವೆ

ಆದರೂ ಕೆಲವು ಕಡೆ ಸಣ್ಣ ಪುಟ್ಟ ಪಟಾಕಿ ಗಳನ್ನು ಹೊಡೆದಿದ್ದಾರೆ. ಮತ್ತೆ ಕೆಲವು ಕಡೆ ಒಲವಿಲ್ಲದಿದ್ದರೂ ಅನಿವಾರ್ಯ ಎಂಬಂತೆ ಕೆಲವೆಡೆ ಪಟಾಕಿ ಸಂಪ್ರದಾಯ ರೂಪವಾಗಿ ಬಳಸಿದ್ದು ಕಂಡು ಬಂತು.ಅನೇಕರು ಮಾತ್ರ ಮನೆಗಳ ಮುಂದೆ ಹಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಲಾಯಿತು.

ರಾಜ್ಯ ಸರ್ಕಾರದ ದಿಡೀರ್ ನಿರ್ಧಾರದಿಂದ ಕಂಗಾಲಾಗಿದ್ದು ಪಟಾಕಿ ವ್ಯಾಪಾರಿಗಳು. ಈ ವರ್ಷ ವ್ಯಾಪಾರಕ್ಕೆ ಅಡ್ಡಿಮಾಡಬೇಡಿ. ಮುಂದಿನ ವಷ೯ದಿಂದ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳನ್ನು ಪರಿಪರಿಯಿಂದ ಬೇಡಿಕೊಂಡ ದೃಶ್ಯಗಳನ್ನು ಹಲವು ಕಡೆ ಕಾಣಬಹುದಿತ್ತು.

ಸಂಪ್ರದಾಯಸ್ಥರು ಮನೆಯಲ್ಲಿ ಸಿಹಿ ಮಾಡಿ ಹಬ್ಬ ಆಚರಿಸಿದರು. ಒಟ್ಟಿನಲ್ಲಿ ಈ ವರ್ಷ ಕೊರೊನಾ ಕರಿ ನೆರಳಿನಲ್ಲೂ ಬೆಳಕಿನ ಸಂಭ್ರಮಕ್ಕೆ ಚ್ಯುತಿ ಬಾರದಂತೆ ನರಕ ಚತುರ್ದಶಿ ನಡೆಯಿತು.

Copyright © All rights reserved Newsnap | Newsever by AF themes.
error: Content is protected !!