December 22, 2024

Newsnap Kannada

The World at your finger tips!

Bank employee theft

ಗ್ರಾಹಕರ ಖಾತೆಯಿಂದ 1.88 ಕೋಟಿ ರು ಎಗರಿಸಿ ಬ್ಯಾಂಕ್‌ ಸಿಬ್ಬಂದಿ ಪರಾರಿ !

Spread the love

ಬೆಂಗಳೂರು ಗ್ರಾಮಾಂತರ : ಗ್ರಾಹಕರ ಖಾತೆಯಿಂದ 1.88 ಕೋಟಿ ರು ವರ್ಗಾವಣೆ ಮಾಡಿಕೊಂಡು ಬ್ಯಾಂಕ್‌ ಸಿಬ್ಬಂದಿ ಪರಾರಿಯಾಗಿರುವ ಘಟನೆ ದೇವನಹಳ್ಳಿಯ ಚನ್ನರಾಯಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನಲ್ಲಿ ಜರುಗಿದೆ.

ಬೇರೆ ಬೇರೆ ಗ್ರಾಹಕರ ಖಾತೆಗಳಿಂದ 1.89 ಕೋಟಿರು ಹಣವನ್ನು ಬ್ಯಾಂಕ್‌ ಮ್ಯಾನೇಜರ್‌ ಗಣೇಶ್ ಬಾಬು ಮತ್ತು ಕಚೇರಿಯ ಸಹಾಯಕ ಜಿತೇಂದ್ರ ಕುಮಾರ್‌ವರ್ಗಾವಣೆ ಮಾಡಿಕೊಂಡು ಸದ್ಯ ಇಬ್ಬರು ಕೂಡ ತಲೆ ಮರೆಸಿಕೊಂಡಿದ್ದಾರೆ. ಜಲಾಶಯಗಳ ನೀರಿನ ಮಟ್ಟ –

ನಾಪತ್ತೆಯಾದ ಇಬ್ಬರಿಗಾಗಿ ಚನ್ನರಾಯಪಟ್ಟಣ ಪೊಲೀಸ್ ಠಾಣೆ ಪೋಲಿಸರು ಬಲೆ ಬೀಸಿದ್ದಾರೆ. ಈ ಇಬ್ಬರು ಆರೋಪಿಗಳು ಗುಜರಾತ್‌ ಮೂಲದ ಆನ್‌ಲೈನ್‌ ಜೂಜು ಮತ್ತು ಕ್ಯಾಸಿನೊಗಳಿಗೆಈ ಹಣ ಬಳಸಿಕೊಂಡಿದ್ದಾರೆ ಎನ್ನುವ ಆರೋಪವಿದೆ.

WhatsApp Image 2023 07 21 at 9.21.34 PM

ಗ್ರಾಹಕರು ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲು ಸರ್ಕಾರ ವರ್ಗಾವಣೆ ಮಾಡಿದ ಹಣ ಖಾತೆಗಳಲ್ಲಿ ಜಮಾ ಆಗಿದೆಯೇ ಎಂದು ಪರಿಶೀಲನೆ ನಡೆಸಿದ ವೇಳೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ತುರುವೇಕೆರೆ – ಗ್ರಾಪಂ ಸದಸ್ಯನಿಗೆ ಚಪ್ಪಲಿನಿಂದ ಹೊಡೆದ ಸದಸ್ಯೆ !

ಗುರುವಾರ ಬ್ಯಾಂಕ್‌ ಮುಂದೆ ಬ್ಯಾಂಕ್‌ ಗ್ರಾಹಕರು ಪ್ರತಿಭಟನೆ ನಡೆಸಿದ ವೇಳೇಯಲ್ಲಿ, ಬ್ಯಾಂಕ್‌ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನ ಕಾರರನ್ನು ಸಮಾಧಾನ ಮಾಡಿದ್ದು, ತಮ್ಮ ಹಣವನ್ನು ವಾಪಸ್ಸು ನೀಡುವುದಾಗಿ ಹೇಳಿ ಕಳುಹಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!