- ಜಲಾಶಯಗಳಿಗೆ ಒಳ ಹರಿವಿನ ಹೆಚ್ಚಳ
- ಕೊಡಗಿನಲ್ಲಿ ಇಂದೂ ಸಹ ಶಾಲಾ – ಕಾಲೇಜ್ ಗೆ ರಜೆ
- ಭಾಗಮಂಡಲ- ಮಡಿಕೇರಿ- ವಿರಾಜಪೇಟೆ ಸಂಪರ್ಕ ಕಡಿ ತ
ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಗುರುವಾರ ಬಿರುಸುಗೊಂಡಿದೆ. ಕಳೆದ 24 ಗಂಟೆಗಳಿಂದ ನಿರಂತರ ಮಳೆ ಬೀಳುತ್ತಿದ್ದು, ಕಾವೇರಿ ನದಿಯಲ್ಲಿಯೂ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ಕೊಡಗು ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆ ಮುಂದುವರೆದಿದೆ ಮಳೆ ಹಿನ್ನೆಲೆಯಲ್ಲಿ ನಾಳೆ ಶುಕ್ರವಾರ ಕೊಡಗು ಜಿಲ್ಲೆಯ ಅಂಗನವಾಡಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನ ಮಟ್ಟ ಹೆಚ್ಚುತಲೇ ಇದೆ. ತ್ರಿವೇಣಿ ಸಂಗಮ ಜಲಾವೃತವಾಗಿದೆ ಭಾಗಮಂಡಲ ಮತ್ತು ಮಡಿಕೇರಿ ಹಾಗೂ ಭಾಗಮಂಡಲ- ವಿರಾಜಪೇಟೆ ನಡುವಿನ ಸಂಪರ್ಕ ಕಡಿತಗೊಂಡಿದೆ.
ಜಿಲ್ಲೆಯ ಅಲ್ಲಲ್ಲಿ ಗಾಳಿಯಿಂದಾಗಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕ್ಷಿಪ್ರಕಾಯ೯ಪಡೆ ಸಿಬ್ಬಂದಿಗಳು ಇವುಗಳನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸುತ್ತಿದ್ದಾರೆ.
2859 ಅಡಿ ಗರಿಷ್ಟ ಸಂಗ್ರಹ ಸಾಮಥ್ಯ೯ದ ಹಾರಂಗಿ ಜಲಾಶಯದಲ್ಲಿ ಇಂದು 2827 ಅಡಿ ನೀರಿನ ಸಂಗ್ರಹವಿದೆ. 1557 ಕ್ಯೂಸೆಕ್ ನೀರಿನ ಒಳಹರಿವಿದೆ.
ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ವಿರಾಜಪೇಟೆ ತಹಶಿಲ್ದಾರ್ ರಾಮಚಂದ್ರ, ನೋಡಲ್ ಅಧಿಕಾರಿ ರಾಹುಲ್ ಇತರರು ಇಂದು ಬೇತ್ರಿ ಬಳಿ ಹರಿಯುತ್ತಿರುವ ನೀರಿನ ಹರಿವು ಹೆಚ್ಚಳ ವೀಕ್ಷಿಸಿದರು.ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭ
NH:275 ಸಂಪಾಜೆ ಯಿಂದ ಮಾದೇನಾಡು, – ರಾಷ್ಟ್ರೀಯ ಹೆದ್ದಾರಿ ಮದೆನಾಡು ಬಳಿ ರಸ್ತೆಯ ಗುಂಡಿ ಬಿದ್ದಿರುವುದನ್ನು ಸರಿಪಡಿಸುವುದು, ಹೆದ್ದಾರಿ ಬದಿ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ಮಾಡುವುದು ಹೀಗೆ ಹಲವು ನಿರ್ವಹಣಾ ಕಾರ್ಯವನ್ನು ಹೆದ್ದಾರಿ ಎಂಜಿನಿಯರಿಂಗ್ ವಿಭಾಗ ವತಿಯಿಂದ ಕೈಗೊಳ್ಳಲಾಗಿದೆ ಎಂದು ಹೆದ್ದಾರಿ ವಿಭಾಗದ ಎಇಇ ನಾಗರಾಜು ಅವರು ತಿಳಿಸಿದ್ದಾರೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ