ಬೆಂಗಳೂರು: ರಾಜ್ಯದಲ್ಲಿ ಗುರುವಾರವೂ ಲೋಕಾಯುಕ್ತ ಅಧಿಕಾರಿಗಳು ಕೆ.ಆರ್‌ಪುರಂ ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ದಾಳಿ ಮುಂದುವರೆಸಿದ್ದು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬುಧವಾರ ಬೆಳಗ್ಗೆಯೇ ದಾಳಿ ನಡೆಸಿದ್ದ ಅಧಿಕಾರಿಗಳು, ರಾತ್ರಿ ಪೂರ್ತಿ ಸಹಕಾರ ನಗರದ ನಿವಾಸದಲ್ಲೇ ಮೊಕ್ಕಾಂ ಹೂಡಿದ್ದರು.
ಇಂದು ಸಹ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. 2 ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು ಅಜಿತ್ ರೈಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಸಿಕ್ಕಿದ್ದೇನು ?
- 1) ದಾಳಿ ವೇಳೆ 40 ಲಕ್ಷ ರೂ. ನಗದು ಸಹಿತ 1.90 ಕೋಟಿ ರೂ. ಮೌಲ್ಯದ ವಸ್ತುಗಳು ಪತ್ತೆಯಾಗಿವೆ.
- 2) 100 ಎಕರೆಗೂ ಅಧಿಕ ಆಸ್ತಿ ಸಂಬಂಧಿತ ದಾಖಲೆಗಳು ಪತ್ತೆಯಾಗಿವೆ. ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಿನಲ್ಲಿ ಆಸ್ತಿ ಪತ್ರಗಳು ಸಿಕ್ಕಿದೆ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
- 3) ದೊಡ್ಡಬಳ್ಳಾಪುರದ ಬಳಿ 98 ಎಕರೆ ಹೊಂದಿರುವ ಭೂಮಿ ಪತ್ರ ಲಭ್ಯವಾಗಿದೆ. ಈ ಆಸ್ತಿಯ ಮೌಲ್ಯ 300 ಕೋಟಿ ರೂ. ಎನ್ನಲಾಗಿದೆ.
- 4) ಈ ಜಾಗದಲ್ಲಿ ಹಾರ್ಸ್ ರೈಡಿಂಗ್ ಸ್ಕೂಲ್ ಮಾಡಲು ತಯಾರಿ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇದ
- 5) ಕಲ್ಲೂರು ಬಳಿ 30 ಎಕರೆ ಜಮೀನು ಇರುವ ಬಗ್ಗೆ ಆಸ್ತಿ ಪತ್ರ ಪತ್ತೆಯಾಗಿದೆ.
ಇಂದು ಬ್ಯಾಂಕ್ ಸ್ಟೇಟ್‍ಮೆಂಟ್ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ನೂರಾರು ಎಕರೆ ಜಾಗದ ಪತ್ರಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
- 6) ಲ್ಯಾಂಡ್ ಕ್ರೂಜರ್, ಇನ್ನೋವಾ, ಫಾರ್ಚೂನರ್, ಮಿನಿ ಕೂಪರ್ ಕಾರು ಹಾಗೂ ಡುಕಾಟಿ ಸೇರಿ ಕೆಲ ಬೈಕ್‍ಗಳು ದಾಳಿ ವೇಳೆ ಪತ್ತೆಯಾಗಿವೆ. ವರ್ಷಕ್ಕೆ 1 ಕೋಟಿ ರೂ.ಗಳಿಗಿಂತಲೂ ಅಧಿಕ ಆದಾಯ ಹೊಂದಿರುವ ಅಜಿತ್ ರೈ ಆದಾಯಕ್ಕೂ ಮತ್ತು ದೊರೆತಿರುವ ಆಸ್ತಿಗೂ ಸಾಕಷ್ಟು ವ್ಯತ್ಯಾಸ ಇದೆ ಎಂದು ತಿಳಿದು ಬಂದಿದೆ.
- 7) ತಹಶೀಲ್ದಾರ್ ಅಜಿತ್ ರೈಗೆ ಸಂಬಂಧಿಸಿದ ಬ್ಯಾಂಕ್ ಅಕೌಂಟ್ ಫ್ರೀಜ್ ಮಾಡುವಂತೆ ಲೋಕಾಯುಕ್ತ ಅಧಿಕಾರಿಗಳು ಬ್ಯಾಂಕ್‍ಗೆ ಪತ್ರ ಬರೆದಿದ್ದಾರೆ.
ಇದನ್ನು ಓದಿ – ಬೆಂ-ಮೈ ಎಕ್ಸ್‌ಪ್ರೆಸ್‌ವೇ: ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ – ದಂಪತಿ ಸಾವು
ದಾಳಿ ನಡೆದಿರುವ ಸ್ಥಳಕ್ಕೆ ಲೋಕಾಯುಕ್ತ ಎಸ್‍ಪಿ ಆಶೋಕ್ ಭೇಟಿ ನೀಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ