December 20, 2024

Newsnap Kannada

The World at your finger tips!

modi karge

ನಾನು ಹಾವಾಗಿ ಜನರ ಕೊರಳಲ್ಲಿ ಇರಲು ಸಿದ್ದ – ಖರ್ಗೆ ಹೇಳಿಕೆಗೆ ಪ್ರಧಾನಿ ಮೋದಿ ಟಾಂಗ್

Spread the love

ಕೋಲಾರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ನನಗೆ ದೇಶದ ಜನರೇ ಈಶ್ವರನ ಸ್ವರೂಪಿಗಳು,ಹಾವು ಶಿವನ ರೂಪ. ನಾನು ಹಾವಾಗಿ ಜನರ ಕೊರಳಲ್ಲಿ ಇರಲು ಸಿದ್ದ ಎಂದು ಹೇಳಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ಜನರು ನೆಮ್ಮದಿಯಿಂದ ಇರುತ್ತಾರೆ.

 ಭ್ರಷ್ಟಾಚಾರದ ವಿರುದ್ಧ ನಾನು ಹೋರಾಡುತ್ತೇನೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ತುಂಬಿತ್ತು ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕೋಲಾರದಲ್ಲಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನವರು ರಾಜ್ಯದ ಅಭಿವೃದ್ದಿ ಮಾಡಲ್ಲ. ಡಬಲ್ ಇಂಜಿನ್ ಸರ್ಕಾರ ರಾಜ್ಯದ ಜನರ ಅಭಿವೃದ್ದಿ ಮಾಡಲಿದೆ. ಇಷ್ಟೊಂದು ಜನಸಾಗರ ನೋಡುತ್ತಿದ್ದರೆ ಕಾಂಗ್ರೆಸ್, ಜೆಡಿಎಸ್ ನವರಿಗೆ ಭಯವಾಗುತ್ತಿರಬೇಕಲ್ವಾ ಎಂದರು.

ಕಾಂಗ್ರೆಸ್, ಜೆಡಿಎಸ್ ಕರ್ನಾಟಕದ ಅಭಿವೃದ್ದಿಗೆ ಕಂಟಕವಾಗಿದೆ ದೇಶದಲ್ಲಿ ಕರ್ನಾಟಕ ನಂಬರ್ 1 ಮಾಡುವುದೇ ನಮ್ಮ ಗುರಿ. ನಾವು ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಹೈವೇ ಸೇರಿ ಹಲವು ಅಭಿವೃದ್ದಿ ಕೆಲಸ ಮಾಡಿದ್ದೇವೆ. ನಾವು ಹಳ್ಳಿ ಹಳ್ಳಿಗೂ ಯೋಜನೆಗಳನ್ನು ತಲುಪಿಸಿದ್ದೇವೆ ಎಂದರು.

ಕೋಲಾರಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಬುದ್ದನ ವಿಗ್ರಹ ಗಿಫ್ಟ್ ಆಗಿ ನೀಡಿ ಸತ್ಕಾರ ಮಾಡಲಾಗಿದೆ. ಕಂಬಳಿ, ಶಾಲು ಹೊದಿಸಿ ಪ್ರಧಾನಿ ಮೋದಿಗೆ ಸನ್ಮಾನ ಮಾಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!