February 19, 2026

Newsnap Kannada

The World at your finger tips!

presidental election,BJP,election

There is no discussion about Lok Sabha election contest: Jagdish Shettar ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಯಾವುದೇ ಚರ್ಚೆ ಇಲ್ಲ : ಜಗದೀಶ್​ ಶೆಟ್ಟರ್​

ನಂಗೆ ಯಾವುದೇ ಹುದ್ದೆ ಬೇಡಾಗಿತ್ತು : ಶಾಸಕನಾಗಿ ಕೆಲಸ ಮಾಡುತ್ತಿದ್ದೆ – ಶೆಟ್ಟರ್

Spread the love

ನನಗೆ ಯಾವ ದೊಡ್ಡ ಹುದ್ದೆ ಬೇಡ. ನನಗೆ ಶಾಸಕನಾಗಿ ಕೆಲಸ ಮಾಡುವ ಅವಕಾಶ ಕೊಟ್ಟಿದ್ದರೆ ಸಾಕಿತ್ತು ಎಂದು ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶಿರಸಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಈ ಹಿಂದೆ ನಿರ್ಧಾರ ಮಾಡಿದಂತೆ ರಾಜೀನಾಮೆ ನೀಡುತ್ತಿದ್ದೇನೆ. ನಾಯಕರು ನಿನ್ನೆ ನನ್ನನ್ನು ಸಂಪರ್ಕ ಮಾಡಿದ್ದರು. ನನ್ನ ಷರತ್ತು ಒಪ್ಪಲಿಲ್ಲ. ಇಂದು ಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದರು, ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಜಿಎಸ್ ಟಿ ಹೊರೆ ತಪ್ಪಿಲ್ಲ

ನಾನು ಉತ್ತರಕರ್ನಾಟಕದಲ್ಲಿ
ಪಕ್ಷಕ್ಕೆ ಸಹಕಾರ ಕೊಟ್ಟು ಸಂಘಟನೆ ಮಾಡಿದ್ದೇನೆ. ನನಗೆ ಯಾವುದೇ ಮುನ್ಸೂಚನೆ ಇಲ್ಲದೇ ಈ ರೀತಿ ಮಾಡಿರೋದು ಬೇಸರ ತರಿಸಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದೆ. ಮೂಲವಾಗಿ ಬಿಜೆಪಿಯಲ್ಲಿದ್ದವರನ್ನು
ಹೊರಗಡೆ ಹಾಕಲಾಗುತ್ತಿದೆ. ಇದು ಮಾನಸಿಕವಾಗಿ ಬೇಸರ ತರಿಸಿದೆ ಎಂದು ತಿಳಿಸಿದರು

ಮುಂದಿನ ನಿರ್ಧಾರದ ಬಗ್ಗೆ ಹುಬ್ಬಳ್ಳಿಗೆ ಹೋಗಿ ಅಂತಿಮ ನಿರ್ಧಾರ ಮಾಡುತ್ತೇನೆ. ನಾನಿನ್ನು ಯಾರ ಜೊತೇನೂ ಮಾತಾಡಿಲ್ಲ, ಸಂಪರ್ಕ ಮಾಡಿಲ್ಲ ಎಂದರು

error: Content is protected !!