January 10, 2025

Newsnap Kannada

The World at your finger tips!

28573bed 0697 4151 b78e 3e329e1fd42a

ವಿನಯ್ ಕುಲಕರ್ಣಿಗೆ ಜೈಲಿನಲ್ಲೇ ದೀಪಾವಳಿ

Spread the love

ಧಾರವಾಡದ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶ್ ಕೊಲೆಯ ಪ್ರಕರಣದ ಆರೋಪಿ ಸ್ಥಾನ ದಲ್ಲಿರುವ ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ.
ಬೇಲ್ ಸಿಗದೇ ಹೋದರೆ ಮಾಜಿ ಸಚಿವರು ಬೆಳಗಾವಿಯ ಹಿಂಡಲಗಾ ಜೈಲಿನಲ್ಲೇ ದೀಪಾವಳಿ‌ ಆಚರಿಸುವುದು ಬಹುತೇಕ ಪಕ್ಕಾ ಆಗಿದೆ.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ಬಂಧಿಸಿದ್ದರು. ನಿನ್ನೆಗೆ ಮೂರು ದಿನಗಳ ಸಿಬಿಐ ಕಸ್ಟಡಿ‌ ಮುಗಿದದ್ದರಿಂದ ಇಂದು ಸಿಬಿಐ ವಿನಯ್ ಅವರನ್ನು ವಿಡೀಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಹುಬ್ಬಳ್ಳಿಯ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ವಿನಯ್ ಅವರಿಗೆ ನವೆಂಬರ್ 23ರ ವರೆಗೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಅವರನ್ನು ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಕಳಿಸುವ ಸಾಧ್ಯತೆಗಳವೆ. ಅವರು ಈ ಬಾರಿಯ ದೀಪಾವಳಿಯನ್ನು ಅಲ್ಲಿಯೇ ಆಚರಿಸಬೇಕಾಗಬಹುದು ಎಂದು‌ ಹೇಳಲಾಗುತ್ತಿದೆ‌.

Copyright © All rights reserved Newsnap | Newsever by AF themes.
error: Content is protected !!