ಮಂಡ್ಯ: ಸಕ್ಕರೆ ನಾಡಿನಲ್ಲಿ ರಾಜಕೀಯ ಎಂದರೆ ಉಸಿರಾಟದ ಒಂದು ಭಾಗ. ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕರದ್ದೇ ಕಾರುಬಾರು. ಈ ನಡುವೆ ಮಹಿಳಾ ರಾಜಕಾರಣಿಗಳೂ ಕೂಡ ತಮ್ಮ ಪಾರುಪತ್ಯ ತೋರಿದ್ದಾರೆ
ಜಿಲ್ಲೆಯಲ್ಲಿ ಈಗ 7 ಕ್ಷೇತ್ರಗಳಲ್ಲಿ ಪುರುಷ ನಾಯಕತ್ವ ಇದೆ, ಆದರೆ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ನಾಯಕತ್ವಕ್ಕೂ ಆದ್ಯತೆ ಇತ್ತು ಶಾಸಕರಾಗಿಯೂ ಸೇವೆ ಮಾಡಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಮಳವಳ್ಳಿ ಕ್ಷೇತ್ರದಲ್ಲಿ ಮಹಿಳೆಯರು ಸ್ಪರ್ಧೆ ಮಾಡಿ ಗೆಲುವಿನ ನಗೆಯನ್ನು ಬೀರಿದ್ದು ಈಗ ಇತಿಹಾಸ ಅಷ್ಟೆ.
ಮೂವರು ಮಹಿಳೆಯರ ಗೆಲುವು :
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಮೂವರು ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ.
ಪುರುಷರೇ ಸ್ಪರ್ಧಿಸಿ ಜಯಗಳಿಸುತ್ತಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ 1972ರಲ್ಲಿ ದಮಮಂತಿ ಬೋರೇಗೌಡ 7,139 ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿ ಆಯ್ಕೆಯಾಗುತ್ತಾರೆ.
1986ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, 1989ರಲ್ಲಿ ದಮಯಂತಿ ಬೋರೇಗೌಡ, 1994ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ.
1999ರಲ್ಲಿ ಪಾರ್ವತಮ್ಮ ಶ್ರೀಕಂಠಯ್ಯ, 2004ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಶಾಸಕಿಯಾಗಿ ಆಯ್ಕೆಯಾಗಿದ್ದೇ ಒಂದು ಇತಿಹಾಸ.
ಮದ್ದೂರಿನಲ್ಲಿ ಇಬ್ಬರು ಮಹಿಳೆಯರ ಗೆಲುವು :
ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 1984ರಲ್ಲಿ ಜಯವಾಣಿ ಮಂಚೇಗೌಡ, 2009ರಲ್ಲಿ ಕಲ್ಪನಾ ಸಿದ್ದರಾಜು.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 1997ರಲ್ಲಿ ಪ್ರಭಾವತಿ ಜಯರಾಂ, ಕಿರುಗಾವಲುಕ್ಷೇತ್ರದಿಂದ
ಕ್ಷೇತ್ರದಿಂದ 1989ರಲ್ಲಿ ಮಲ್ಲಾಜಮ್ಮ ಹಾಗೂ ಈ ಹಿಂದೆ ಅಸ್ತಿತ್ವದಲ್ಲಿದ್ದ ಕಿರುಗಾವಲು ಕ್ಷೇತ್ರದಿಂದ 2004ರಲ್ಲಿ ಎಂ.ಕೆ.ನಾಗಮಣಿ ಶಾಸಕಿಯಾಗಿ ಆಯ್ಕೆಯಾಗಿದ್ದರು.
5 ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶವೇ ಸಿಕ್ಕಿಲ್ಲ :
ಜಿಲ್ಲೆಯ 5 ವಿಧಾನಸಭಾ(ಕಿರುಗಾವಲು, ಕೆರೆಗೋಡು ಕ್ಷೇತ್ರವೂ ಸೇರಿದಂತೆ) ಕ್ಷೇತ್ರದಿಂದ ಎಂಟು ಮಹಿಳಾ ಶಾಸಕಿಯರಾಗಿ ಇತಿಹಾಸ ನಿರ್ಮಿಸಿದ್ದಾರೆ ಮೇಲುಕೋಟೆ ಮತ್ತು ಕೆ.ಆರ್.ಪೇಟೆ, ನಾಗಮಂಗಲ, ಕೆರಗೋಡು ವಿಧಾನಸಭಾ ಕ್ಷೇತ್ರದಿಂದ ಈವರೆಗೆ ಮಹಿಳೆಯರು ಶಾಸಕಿಯರಾಗಿಲ್ಲ. ಜಿಲ್ಲೆಯಿಂದ 8 ಶಾಸಕಿಯರು ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದರೂ, ಯಾರೊಬ್ಬರೂ ಸಚಿವ ಹುದ್ದೆ ಅಲಂಕರಿಸಿಲ್ಲ ಎನ್ನುವುದು ಗಮನಾರ್ಹ
ಆದರೆ 1994ರಲ್ಲಿ ಶಾಸಕಿಯಾಗಿ ಆಯ್ಕೆಯಾದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಜೆ.ಎಚ್.ಪಟೇಲರ ಸರ್ಕಾರದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮಳವಳ್ಳಿ ಕ್ಷೇತ್ರದ ಮಲ್ಲಾಜಮ್ಮ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದಾರೆ.ಇದನ್ನು ಓದಿ –ಧ್ರುವ ನಾರಾಯಣ ಪತ್ನಿಯೂ ವಿಧಿವಶ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
More Stories
ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ