January 29, 2026

Newsnap Kannada

The World at your finger tips!

fc35e78b cfc1 43cf 913c 9dac20325284

ಅಮೇರಿಕಾ ನೂತನ ಅಧ್ಯಕ್ಷ ಬೈಡನ್ ಗೆ ರಾಜ್ಯ ಕಾಂಗ್ರೆಸ್ ಅಭಿನಂದನೆ

Spread the love
biden

ಅಮೇರಿಕಾದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾರತದ ಮೂಲದ ಕಮಲಾ ಹ್ಯಾರಿಸ್ ಗೆ ರಾಜ್ಯ ಕಾಂಗ್ರೆಸ್ ಪರವಾಗಿ ಅಭಿನಂದನೆ ಸಲ್ಲಿಸಿರುವ ರಾಜ್ಯ ಕಾಂಗ್ರೆಸ್ ವಕ್ತಾರ , ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಭಾರತದ ಪ್ರಗತಿಗೆ ಈ ನಾಯಕರ ಅಧಿಕಾರ ಅವಧಿಯಲ್ಲಿ ಪೂರಕವಾದ ನಿರ್ಧಾರವನ್ನು ಕೈಗೊಂಡು, ಸಂಬಂಧಗಳು ವೃದ್ದಿಯಾಗಲಿ ಎಂದು ಹೇಳಿದ್ದಾರೆ.

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಚಲುವರಾಯ ಸ್ವಾಮಿ ವಿಶ್ವ ದೊಡ್ಡಣ್ಣ ಎಂದು ಬಿಂಬಿಸಿಕೊಂಡಿರುವ ಅಮೇರಿಕಾ ಹೊಸ ಆಡಳಿತವು ವಿಶ್ವ ಶಾಂತಿ ಕಾಪಾಡುವ ನಿಟ್ಟಿನಲ್ಲೂ ನಾಯಕರು ಶ್ರಮಿಸಲಿ ಎಂದಿದ್ದಾರೆ.

kamal harris

ಭಾರತದ ತಮಿಳುನಾಡಿನ ಮೂಲದ ಕಮಲಾದೇವಿ ಹ್ಯಾರಿಸ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಚಲುವರಾಯಸ್ವಾಮಿ, ಕಪ್ಪು ವರ್ಣದ ದಕ್ಷಿಣ ಏಷ್ಯದ ಮಹಿಳೆಯೊಬ್ಬರು ಅಮೇರಿಕಾ ಇತಿಹಾಸದಲ್ಲಿ ಪ್ರಥಮ ಬಾರಿಗೆ ಉನ್ನತ ಹುದ್ದೆಗೆ ಏರಿರುವುದು ಭಾರತದ ಹಾಗೂ ಎಲ್ಲಾ ಮಹಿಳೆಯರಿಗೆ ಸಂದ ಗೌರವ ಇದಾಗಿದೆ ಎಂದಿದ್ದಾರೆ.

ಮಂಡ್ಯಕ್ಕೆ ಹೆಮ್ಮೆ

vivek

ಮಂಡ್ಯದ ಸುಪುತ್ರ ಹಲ್ಲೇಗೆರೆ ಗ್ರಾಮದ ಡಾ. ವಿವೇಕ್ ಮೂರ್ತಿ ಅವರಿಗೆ ಜೋ ಬೈಡನ್ ಆಡಳಿತ ದಲ್ಲಿ ಆರೋಗ್ಯ ಪಡೆಯ ಮುಖ್ಯಸ್ಥರಾಗಿ ನೇಮಕವಾಗುವ ಸಾಧ್ಯತೆ ಇದೆ. ಮಂಡ್ಯ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳುವ ಮೂಲಕ ಡಾ. ವಿವೇಕ್ ಮೂರ್ತಿ ಅವರಿಗೆ ಚಲುವರಾಯಸ್ವಾಮಿ ಶುಭಾಷಯಗಳನ್ನು ತಿಳಿಸಿದ್ದಾರೆ.

dc Cover hng15nu392qqpodkmnu9la8lq3 20190413025544.Medi

error: Content is protected !!