January 28, 2026

Newsnap Kannada

The World at your finger tips!

SSLC , results, students

SSLC ವಿದ್ಯಾರ್ಥಿಗಳಿಗೆ ಈ ಬಾರಿಯೂ ಶೇ.10 ರಷ್ಟು ಕೃಪಾಂಕ

Spread the love

2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಬಾರಿಯೂ ಕೊರೊನಾ ಬ್ಯಾಚ್ ಎಂದು ಪರಿಗಣಿಸಿ ಶೇ. 10 ರಷ್ಟು ಕೃಪಾಂಕ ನೀಡಲಾಗುವುದು.

ಎಸ್‌ಎಸ್ ಎಲ್ ಸಿ ಬೊರ್ಡ್ ನಿರ್ದೇಶಕ ರಾಮಚಂದ್ರ, ಈ ಬಾರಿಯೂ ಕೊರೊನಾ ಬ್ಯಾಚ್ ಎಂದು ಪರಿಗಣಿಸಿ ಶೇ.10 ರಷ್ಟು ಗ್ರೇಸ್ ಅಂಕ ನೀಡಲಾಗುವುದು. ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ ಅಂಕ ನೀಡಲಾಗುತ್ತದೆ.

ತೇರ್ಗಡೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಗಳು 31-03-2023 ರಿಂದ 15-04-2023ರವರೆಗೆ ನಡೆಯಲಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಗೆ 15,498 ಶಾಲೆಗಳಿಂದ 8,42,811 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಶಾಲಾ ವಿದ್ಯಾರ್ಥಿಗಳು 7,94,611 ಆಗಿದ್ದರೇ ಪುನರಾವರ್ತಿತ ವಿದ್ಯಾರ್ಥಿಗಳು 20,750 ಆಗಿದ್ದಾರೆ. ಖಾಸಗಿ ಅಭ್ಯರ್ಥಿಗಳು 18,272. ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 8,862 ಎಂದು ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ.
8,42,811 ನೋಂದಾಯಿತ ವಿದ್ಯಾರ್ಥಿಗಳಿಗಾಗಿ ರಾಜ್ಯಾಧ್ಯಂತ ಒಟ್ಟು 3,305 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಸರ್ಕಾರಿ ಶಾಲೆಗಳ 3,60,862, ಅನುದಾನಿತ ಶಾಲೆಗಳ 2,20,831 ಹಾಗೂ ಅನುದಾನ ರಹಿತ ಶಾಲೆಗಳ 2,61,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದೆ.
ಬಿ.ಇ.ಓ ನೇತೃತ್ವದ ಸಮಿತಿಯ ಸಮ್ಮುಖದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಖಜಾನೆಗಳಿಂದ ಪರೀಕ್ಷೆ ಕೇಂದ್ರಗಳಿಗೆ ರವಾನಿಸಬೇಕು.

ಎಸ್ ಎಸ್ ಎಲ್ ಸಿ.

ಪರೀಕ್ಷೆಯ ವೇಳಾಪಟ್ಟಿ
ಮಾರ್ಚ್ 31- ಪ್ರಥಮ ಭಾಷೆ,
ಏಪ್ರಿಲ್ 3- ಗಣಿತ,
ಏಪ್ರಿಲ್ 6- ದ್ವಿತೀಯ ಭಾಷೆ
ಏಪ್ರಿಲ್ 10- ವಿಜ್ಞಾನ,
ಏಪ್ರಿಲ್ 12- ತೃತೀಯ ಭಾಷೆ
ಏಪ್ರಿಲ್ 15- ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.

ಇದನ್ನು ಓದಿ –ಆದರ್ಶ ಪುರುಷ , ಮರ್ಯಾದಾ ಪುರುಷೋತ್ತಮ ಶ್ರೀರಾಮ

#SSLC #Karnatakaboard #Gracemarks #Kkarnataka #goodnews #examination #ಕೊರೊನಾ_ಬ್ಯಾಚ್ # ಗ್ರೇಸ್_ಅಂಕ

error: Content is protected !!