November 22, 2024

Newsnap Kannada

The World at your finger tips!

WhatsApp Image 2023 03 23 at 12.23.41 PM

Those who keep 'Modi sir name' are thieves: Rahul who mocked PM gets 2 years in jail 'ಮೋದಿ ಸರ್ ನೇಮ್' ಇಟ್ಟುಕೊಂಡವರು ಕಳ್ಳರು: ಪ್ರದಾನಿ ಮೂದಲಿಸಿದ್ದ ರಾಹುಲ್ ಗೆ 2 ವರ್ಷ ಜೈಲು

‘ಮೋದಿ ಸರ್ ನೇಮ್’ ಇಟ್ಟುಕೊಂಡವರು ಕಳ್ಳರು: ಪ್ರದಾನಿ ಮೂದಲಿಸಿದ್ದ ರಾಹುಲ್ ಗೆ 2 ವರ್ಷ ಜೈಲು

Spread the love

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ ಎಂದು ಸೂರತ್ ಜಿಲ್ಲಾ ಕೋರ್ಟ್‌ ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2019 ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ರಾಹುಲ್‌ ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯ ಪ್ರಮಾಣ ಪ್ರಕಟಿದೆ

ತೀರ್ಪು ಪ್ರಕಟವಾಗುವ ಮೊದಲೇ ರಾಹುಲ್‌ ಗಾಂಧಿ ಕೋರ್ಟ್‌ಗೆ ಹಾಜರಾಗಿದ್ದಾರೆ.

ಈ ತೀರ್ಪನ್ನು ಪ್ರಶ್ನಿಸಿ ಜಾಮೀನು ಕೋರಿ ರಾಹುಲ್‌ ಪರ ವಕೀಲರು ಮೇಲ್ಮನವಿ ಸಲ್ಲಿಸಿ ಜಮೀನು ಪಡೆದುಕೊಂಡರು.

ನಿರವ್ ಮೋದಿ , ಲಲಿತ್ ಮೋದಿ, ನರೇಂದ್ರ ಮೋದಿ ಇವೆರೆಲ್ಲರ ಸರ್‌ನೇಮ್ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದರು.

ಈ ಹೇಳಿಕೆಯನ್ನು ಆಧಾರಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್‌ ಮಾನಹಾನಿ ದೂರು ದಾಖಲಿಸಿದ್ದರು.ಇದನ್ನು ಓದಿ –ಗೊಂದಲದಿಂದ ಹೊರ ಬರದ ಸಿದ್ದು: ಪತ್ನಿ , ಪುತ್ರನ ಸಲಹೆಗಳೇ ವಿಭಿನ್ನ

Copyright © All rights reserved Newsnap | Newsever by AF themes.
error: Content is protected !!