ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಆಡಳಿತ ಮಂಡಳಿ ತಮಿಳುನಾಡಿನ ರಾಜಧಾನಿ ಚೆನ್ನೈನ ಟಿ ನಗರದ ಜಿಎನ್ ಚೆಟ್ಟಿ ರಸ್ತೆಯಲ್ಲಿ ತನ್ನ 2ನೇ ದೇವಸ್ಥಾನವನ್ನು ನಿರ್ಮಿಸಿದ್ದು, ಮಾರ್ಚ್ 17 ರಂದು ಉದ್ಘಾಟಿಸಲಿದೆ.
ಇದು ಟಿಟಿಡಿಯ ಮೊದಲ ದೇವಸ್ಥಾನ ಮತ್ತು ಮಾಹಿತಿ ಕೇಂದ್ರದ ಬಳಿ ಇದೆ. ಇದು ವೆಂಕಟೇಶ್ವರನ ದೈವಿಕ ಪತ್ನಿ ಪದ್ಮಾವತಿ ದೇವಿಗೆ ಸಮರ್ಪಿತವಾಗಿದೆ.
ಭಾನುವಾರದಿಂದ ದೇವಾಲಯದಲ್ಲಿ ಅಂಕುರಾರ್ಪಣದಿಂದ ಪ್ರಾರಂಭವಾಗುವ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಟಿಟಿಡಿಯ ಚೆನ್ನೈ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮತ್ತು ಟಿಟಿಡಿ ಟ್ರಸ್ಟ್‌ನ ವಿಶೇಷ ಆಹ್ವಾನಿತ ಎಜೆ ಶೇಖರ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು. ಮಾರ್ಚ್ 17 ರಂದು ಮಹಾಕುಂಭಾಭಿಷೇಕದೊಂದಿಗೆ ಮುಕ್ತಾಯಗೊಳ್ಳಲಿದೆ.
ದೇವಸ್ಥಾನಕ್ಕೆ ಭೂಮಿಯನ್ನು ಚಿತ್ರನಟಿ ಪಿ ಕಾಂಚನಾ ದಾನ ಮಾಡಿದ್ದಾರೆ. ದೇವಾಲಯವು 14880 ಚದರ ಅಡಿ ವಿಸ್ತಾರವಾಗಿದೆ. 7 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣವಾಗಿದೆ. 1.1 ಕೋಟಿ ವೆಚ್ಚದಲ್ಲಿ ರಾಜಗೋಪುರ ನಿರ್ಮಾಣ ಪೂರ್ಣಗೊಂಡಿದೆ. ಶೇಖರ್ ರೆಡ್ಡಿ ಅವರು ಕೊಡುಗೆಯಾಗಿ ನೀಡಿದ್ದಾರೆ. ಮಾರ್ಚ್ 17 ರಂದು ನಡೆಯುವ ಶ್ರೀ ಪದ್ಮಾವತಿ ಅಮ್ಮನವರ ಮಹಾಕುಂಭಾಭಿಷೇಕದಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.ಇದನ್ನು ಓದಿ –ಕಲಬುರಗಿಯಲ್ಲಿ ಮಹಿಳಾ ASI ಜೊತೆ IPS ಅಧಿಕಾರಿ ಅಕ್ರಮ ಸಂಬಂಧ : ದೂರು ದಾಖಲು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
#Tirupati #chennai #secondTirupati #TTD #kannadanews
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ