December 19, 2024

Newsnap Kannada

The World at your finger tips!

transfer , DYSP , state

34 DySPs transferred in the state ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ

ರಾಜ್ಯದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಸೇವಾ ಪ್ರಶಸ್ತಿ ಗರಿಮೆ

Spread the love

ಜನವರಿ 26ರ ಗಣರಾಜ್ಯೋತ್ಸವದಂದು ಕೇಂದ್ರ ಗೃಹ ಇಲಾಖೆಯಿಂದ ನೀಡುವಂತ ರಾಷ್ಟ್ರಪತಿ ಸೇವಾ ಪದಕ, ವಿಶಿಷ್ಟ ಸೇವಾ ಪದಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿಯ ಗರಿಮೆ ಸಂದಿದೆ.

2023ನೇ ಸಾಲಿನ ಪ್ರೆಸಿಡೆಂಟ್ ಪೊಲೀಸ್ ಮೆಡಲ್ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿ, ಸಿಐಡಿಯ ಎಡಿಜಿಪಿ ಕೆ.ವಿ ಶರತ್ ಚಂದ್ರ ಅವರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪ್ರಶಸ್ತಿ ಸಂದಿದ್ದರೇ, ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ ರಾಜ್ಯ ಗುಪ್ತ ವಾರ್ತೆಯ ಹೆಚ್ಚುವರಿ ನಿರ್ದೇಶಕರಾದಂತ ಐಪಿಎಸ್ ಅಧಿಕಾರಿ ಲಾಭುರಾಮ್ ಅವರಿಗೆ ಸಂದಿದೆ.

2023ನೇ ಸಾಲಿನ ಗಣರಾಜ್ಯೋತ್ಸವ ರಾಷ್ಟ್ರಪತಿಯವರ ಶ್ಲಾಘನೀಯ ಪದಕ ಪ್ರಶಸ್ತಿಯು ಬೆಂಗಳೂರು ನಗರದ ಸಂಚಾರ ಮತ್ತು ಯೋಜನೆ ಪೊಲೀಸ್ ಇನ್ಸ್ ಪೆಕ್ಟರ್ ಮನೋಜ್ ಎನ್ ಹೋವಳೆ, ಬೆಂಗಳೂರಿನ ಕೆ ಎಸ್ ಆರ್ ಪಿ 3ನೇ ಪಡೆಯ ಸ್ಟೆ.ಆರ್ ಪಿಐ ಬಿ.ಟಿ ವರದರಾಜ, 4ನೇ ಪಡೆಯ ಟಿ.ಎ ನಾರಾಯಣ ರಾವ್, ಎಸ್ ಎಸ್ ವೆಂಕಟರಮಣ ಗೌಡ, 9ನೇ ಪಡೆಯ ಎಸ್ ಪಾಟೀಲ್, ಸಿಐಡಿ ಹೆಡ್ ಕಾನ್ಸ್ ಟೇಬಲ್ ಕೆ.ಪ್ರಸನ್ನ ಕುಮಾರ್ ಗೆ ಸಂದಿದೆ.

WhatsApp Image 2023 01 25 at 9.59.32 PM

ಇನ್ನೂ ತುಮಕೂರು ಸಂಚಾರ ಪಶ್ಚಿಮ ಠಾಣೆಯ ಹೆಸ್ ಸಿ ಪ್ರಭಾಕರ ಹೆಚ್, ಬೆಂಗಳೂರಿನ ಎಸ್ ಸಿ ಅರ್ ಬಿ ಮಹಿಳಾ ಹೆಚ್.ಸಿ ಡಿ.ಸುಧಾ, ಸಿಟಿ ಕಂಟ್ರೋಲ್ ರೂಂ ಸಿಹೆಚ್ ಸಿ ಟಿ.ಆರ್ ರವಿಕುಮಾರ್ ಗೆ ಪ್ರಶಸ್ತಿ ದೊರೆತಿದೆ. ಉಚಿತ ಆರೋಗ್ಯ ಮತ್ತು ಮಧುಮೇಹ ತಪಾಸಣೆ ಶಿಬಿರದಲ್ಲಿ 150ಕ್ಕೂ ಹೆಚ್ಚು ರೋಗಿಗಳ ತಪಾಸಣೆ.

ಬೆಂಗಳೂರು ಪಿಆರ್ ಸಿ ಪ್ರಧಾನ ಕಚೇರಿಯ ಡಿವೈಎಸ್ಪಿ ಎಸ್ ನಾಗರಾಜು, ಕೆಎಲ್‌ಎ ಡಿವೈಎಸ್ಪಿ ಪಿ.ವೀರೇಂದ್ರ ಕುಮಾರ್, ಬೆಂಗಳೂರು, ಬಿ.ಪ್ರಮೋದ್ ಕುಮಾರ್, ಕಲಬುರ್ಗಿಯ ಕರ್ನಾಟಕ ಲೋಕಾಯುಕ್ತ ಡಿವೈಎಸ್ ಪಿ ಸಿದ್ದಲಿಂಗಪ್ಪ ಗೌಡ ಆರ್ ಪಾಟೀಲ್, ಬೆಂಗಳೂರಿನ ಎಸ್ ಟಿ ಎಫ್ ಎನ್ ಕ್ರೋಚ್ ಮಂಟ್ ಡಿವೈಎಸ್ ಪಿ ಸಿ.ವಿ ದೀಪಕ್, ಬೆಂಗಳೂರು ನಗರ ವಿಶೇಷ ವಿಭಾಗದ ಡಿವೈಎಸ್ಪಿ ವಿಜಯ್ ಹೆಚ್ ಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪುರಸ್ಕೃತರಾಗಿದ್ದಾರೆ. ಎಸ್ ಎಂ ಕೃಷ್ಣ ಗೆ ‘ಪದ್ಮವಿಭೂಷಣ’ ಸಾಹಿತಿ ಬೈರಪ್ಪ , ಸುಧಾಮೂರ್ತಿಗೆ ಪದ್ಮಭೂಷಣ ಗೌರವ

ಇವರಲ್ಲದೇ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬಿಎಸ್ ಮಂಜುನಾಖ್, ಅಶೋಕ ನಗರ ಸಂಚಾರ ಪೊಲೀಸ್ ಠಾಣೆಯ ರಾವ್ ಗಣೇಶ್ ಜನಾರ್ಧನ್ ಹಾಗೂ ದಾವಣಗೆರೆ ಸಂಚಾರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಆರ್ ಪಿ ಅನೀಲ್ ಅವರಿಗೆ 2023ನೇ ಸಾಲಿನ ಗಣರಾಜ್ಯೋತ್ಸವ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿ ಸಂದಿದೆ.

Copyright © All rights reserved Newsnap | Newsever by AF themes.
error: Content is protected !!