ಗೋ ಕಳ್ಳಸಾಗಾಣೆದಾರರ ವಿರುದ್ದ ಕಠಿಣ ಕ್ರಮ : ವಿಶೇಷ ಕಾಯ೯ಪಡೆ

Team Newsnap
1 Min Read

ರಾಜ್ಯ ಮತ್ತು ಅಂತರ್ ರಾಜ್ಯದ ಗಡಿ ಭಾಗಗಳಲ್ಲಿ ನಡೆಯುವ ಗೋ ಸಾಗಾಣಿಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗುವುದು. ಅಲ್ಲದೆ ವಿಶೇಷ ಕಾರ್ಯ ಪಡೆ ರಚನೆ ಮಾಡಿ ಗೋ ಕಳ್ಳಸಾಗಾಣಿಕೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

basavaraj bommayi

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೊಮ್ಮಾಯಿ ಕನಾ೯ಟಕ- ಕೇರಳ – ತಮಿಳುನಾಡು ಗಡಿ ಭಾಗದಲ್ಲಿ ಎಲ್ಲಾ ರೀತಿಯ ಎಚ್ಚರಿಕೆ ವಹಿಸಲಾಗಿದೆ. ಕನಾ೯ಟಕದ ಗಡಿ ಆ ಕಡೆಯಲ್ಲಿ ಆಗುವ ಯಾವುದೇ ಪ್ರಕರಣಗಳೂ ಕನಾ೯ಟಕದ ಮೇಲೂ ಪರಿಣಾಮ ಬೀರುವ ಸಾಧ್ಯತಯಿದೆ ಇರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಗೋ ಕಳ್ಳ ಸಾಗಾಣಿಕೆ ಮಾಡುವವರನ್ನು ದಸ್ತಗಿರಿ ಮಾಡಿದ ನಂತರ ಸೂಕ್ತ ಶಿಕ್ಷೆಯಾಗುವ ನಿಟ್ಟಿನಲ್ಲಿ ಕಾನೂನು ಕ್ರಮಕ್ಕೆ ಮುಂದಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಗೋಹತ್ಯೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ – ಗೋವುಗಳನ್ನು ಕಳ್ಳ ಸಾಗಾಣೆ ಮಾಡುವವರ ವಿರುದ್ದವೂ ನಿಗಾವಹಿಸಿ ಅಂಥವರ ವಿರುದ್ದ ಕಠಿಣ ಕ್ರಮಕ್ಕೆ ಚಿಂತನೆ ನಡೆದಿದೆ ಎಂದರು.

ವಿಶೇಷ ಕಾರ್ಯ ಪಡೆ ರಚನೆ

ಗೋ ಕಳ್ಳಸಾಗಾಣೆ, ಹತ್ಯೆ ತಡೆಗೆ ರಾಜ್ಯದಲ್ಲಿ ವಿಶೇಷ ಕಾಯಾ೯ ಪಡೆಯನ್ನೂ ರಚಿಸುವ ಬಗ್ಗೆ ಚಿಂತನೆಯಿದೆ ಎಂದು ಬೊಮ್ಮಾಯಿ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಂಧಲೆ ಸಮಸ್ಯೆ ಬಗ್ಗೆ ಗಮನ ಹರಿಸುತ್ತೇವೆ.
ಕಾಡಾನೆ ಸೇರಿದಂತೆ ವನ್ಯಜೀವಿ ಧಾಳಿಯಿಂದ ಸಂತ್ರಸ್ಥರಾದವರ ಕುಟುಂಬಸ್ಥರಿಗೆ ಮತ್ತು ಕೖಷಿ ಫಸಲು ನಾಶಹೊಂದಿದವರಿಗೆ ಹೆಚ್ಚಿನ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರೊಂದಿಗೆ ಚಚಿ೯ಸಿ ಮುಖ್ಯಮಂತ್ರಿಗಳಿಗೆ ಕೋರಿಕೆ ಸಲ್ಲಿಸಲಾಗುತ್ತದೆ.

ಸಿಬ್ಬಂದಿಯ ಭರ್ತಿಗೆ ಕ್ರಮ

ಡಿಎಆರ್ ನಲ್ಲಿ ಶೇ. 70 ರಷ್ಟು ಸಿಬ್ಬಂದಿಯನ್ನು ಭತಿ೯ ಮಾಡಲಾಗುತ್ತದೆ. ಉಳಿದ ಸಿಬ್ಬಂದಿ ಹುದ್ದೆಗಳನ್ನು ಏಪ್ರಿಲ್ ಮೇ ನೊಳಗಾಗಿ ಭತಿ೯ ಮಾಡಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ಅನಧಿಕೖತ ಹೋಂ ಸ್ಟೇಗಳ ವಿರುದ್ದ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಅನಧಿಕೖತ ಹೋಂಸ್ಟೇ ಗಳ ವಿರುದ್ದ ಕ್ರಮ ಕೈಗೊಳ್ಳದಿದ್ದಲ್ಲಿ ಅಂಥ ಅಧಿಕಾರಿಗಳ ವಿರುದ್ದವೂ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ಯನ್ನು ಸಚಿವರು ನೀಡಿದರು.

Share This Article
Leave a comment