January 10, 2025

Newsnap Kannada

The World at your finger tips!

football , legend , RIP

'Pele', the star of the world football is no more ಪುಟ್ಬಾಲ್ ಲೋಕದ ದೃವತಾರೆ 'ಪೀಲೆ'ವಿಧಿವಶ

ಪುಟ್ಬಾಲ್ ಲೋಕದ ದೃವತಾರೆ ‘ಪೀಲೆ’ವಿಧಿವಶ

Spread the love

ಎರಡು ದಶಕಗಳ ಕಾಲ​ ಫುಟ್ಬಾಲ್​ ಜಗತ್ತಿನ ದೃವತಾರೆ ‘ಪೀಲೆ’ ವಿಧಿವಶವಾದರು.

ನೆಚ್ಚಿನ ಆಟಗಾರನ ಅಗಲಿಕೆಗೆ ಫುಟ್ಬಾಲ್​ ಜಗತ್ತು ಕಂಬನಿ ಮಿಡಿದಿದೆ. ಪೀಲೆ 60-70ರ ದಶಕದಲ್ಲಿ ಫುಟ್ಬಾಲ್​ ಜಗತ್ತಿನ ರಾರಾಜಿಸಿದ್ದ ಹೆಸರಿದು. ಬ್ರೆಜಿಲ್​ ತಂಡದ ಖ್ಯಾತ ಆಟಗಾರನಾಗಿ ವಿಶ್ವಕಪ್​ ಕೀರಿಟವನ್ನು ಮೂರು ಬಾರಿ ಬ್ರೆಜಿಲ್​ ದೇಶದ ಮುಡಿಗೇರಿಸಿದ್ದವರು.ಕ್ರಿಕೆಟಿಗ ರಿಷಬ್ ಪಂತ್ ಕಾರು ಡಿವೈಡರ್ ಗೆ ಡಿಕ್ಕಿ: ಬೆಂಕಿ-ಪ್ರಾಣಾಪಾಯದಿಂದ ಪಾರು

ಕಾಲ್ಚೆಂಡಿನಾಟದ ‘ದಂತಕಥೆ’ ಅಂತಾನೆ ಖ್ಯಾತಿ ಹೊಂದಿದ್ದ ಪೀಲೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

82 ವರ್ಷ ವಯಸ್ಸಿನ ಪೀಲೆ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ರು.
ಕ್ಯಾನ್ಸರ್​ ಅನ್ನೋ ಮಾರಕ ಕಾಯಿಲೆ ಅವರ ದೇಹ ಹೊಕ್ಕಿ ಕೆಲ ದಿನಗಳ ಹಿಂದಷ್ಟೇ ಅವರನ್ನು ಗಂಭೀರ ಸ್ಥಿತಿಗೆ ತಳ್ಳಿತ್ತು. ನವೆಂಬರ್​​ 29ರಿಂದ ಸಾವೋದ ಪೌಲೋದಲ್ಲಿರುವ ಅಲ್ಬರ್ಟ್​ ಐನ್​ಸ್ಟೀನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೀಲೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಎರಡು ದಶಕಗಳ ಫುಟ್ವಾಲ್​ ರಣರಂಗದಲ್ಲಿ ಮಿರಿ ಮಿರಿ ಮಿಂಚಿದ್ದ ಪೀಲೆ, ಪುಟ್ಬಾಲ್​ ಪ್ರಪಂಚದ ‘ಬ್ಲಾಕ್​ ಪರ್ಲ್​’ ಅಂದ್ರೆ ‘ಕಪ್ಪು ಮುತ್ತು’ ಅಂತಾನೆ ಖ್ಯಾತಿ ಹೊಂದಿದ್ದರು.

1940ರ ಅಕ್ಟೋಬರ್​ 23ರಂದು ಬ್ರೆಜಿಲ್​ನಲ್ಲಿ ಜನಿಸಿದ್ದ ಪೀಲೆ 17ನೇ ವಯಸ್ಸಿನಲ್ಲಿ ಅಂದರೆ 1958ರಲ್ಲಿ ಫುಟ್ಬಾಲ್​ ವಿಶ್ವಕಪ್​ಗೆ ಪಾದಾರ್ಪಣೆ ಮಾಡಿದ್ದರು. 1363 ಫುಟ್ವಾಲ್​ ಪಂದ್ಯಗಳನ್ನ ಆಡಿರುವ ಪೀಲೆ ಬರೋಬ್ಬರಿ 1279 ಗೋಲ್​ಗಳನ್ನ ಬಾರಿಸೋ ಮೂಲಕ ಗಿನ್ನೀಸ್​ ದಾಖಲೆ ಬರೆದಿದ್ದರು. 1997ರಲ್ಲಿ ಬ್ರಿಟನ್​ ರಾಣಿಯಿಂದ ಪ್ರತಿಷ್ಠಿತ ನೈಟ್​​​​​ ಪದವಿಯನ್ನ ಪೀಲೆ ಪಡೆದಿದ್ದರು .

100ಕ್ಕೂ ಹೆಚ್ಚು ಹ್ಯಾಟ್ರಿಕ್​ ಗೋಲುಗಳನ್ನು ಬಾರಿಸಿರುವ ಪೀಲೆ ಫುಟ್ಬಾಲ್​ ಪಂದ್ಯಗಳಲ್ಲಿ ಅತೀ ಹೆಚ್ಚು ಹ್ಯಾಟ್ರಿಕ್​ ಗೋಲುಗಳನ್ನ ಬಾರಿಸಿದ ದಾಖಲೆ ಹೊಂದಿದ್ದಾರೆ. ಮಾವಿನ ತೋಪಿನಲ್ಲಿ ಮಾವಿನೊಂದಿಗೆ ಫುಟ್ಬಾಲ್​ ಪಟ್ಟು ಕಲಿತ ಪೀಲೆಗೆ ತಂದೆಯೇ ಮೊದಲ ಗುರು. ಪೀಲೆ ಸಾಧನೆ ಬ್ರೆಜಿಲ್​​ ಅಭಿಮಾನಿಗಳ ಪಾಲಿಗೆ ದೇವರಾಗಿಸಿತು.

Copyright © All rights reserved Newsnap | Newsever by AF themes.
error: Content is protected !!