December 23, 2024

Newsnap Kannada

The World at your finger tips!

WhatsApp Image 2022 12 10 at 4.39.33 PM

ಬೆಂಗಳೂರಿನಲ್ಲಿ ನಾಳೆ ಅಂಬಿ ಪುತ್ರ ಅಭಿಷೇಕ್ – ಅವಿವಾ – ವಿವಾಹ ನಿಶ್ಚಿತಾರ್ಥ

Spread the love

ಕನ್ನಡದ ನಟ ಅಭಿಷೇಕ್​ ಅಂಬರೀಶ್​ ವಿವಾಹ ನಿಶ್ಚಿತಾರ್ಥಕ್ಕೆ ನಾಳೆ ಮುಹೂರ್ತ ನಿಗದಿಯಾಗಿದೆ . ಅಂಬರೀಶ್-ಸುಮಲತಾ ವಿವಾಹ ವಾರ್ಷಿಕೋತ್ಸವದ ದಿನವಾದ ಡಿ 8 ರಂದು ನಿಶ್ಚಿತಾರ್ಥದ ಉಂಗುರಕ್ಕೆ ಪೂಜೆ ಮಾಡಲಾಗಿದೆ.

ನಾಳೆಯೇ (ಡಿ​ 11 ) ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ವಿವಾಹ ನಿಶ್ಚಿತಾರ್ಥ ಖಾಸಗಿ ಹೋಟೆಲ್ ಒಂದರಲ್ಲಿ ನಡೆಯಲಿದೆ. ಅಭಿಷೇಕ್ ತಾಯಿ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ, ಈಗಾಗಲೇ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.

ಅಭಿಷೇಕ್​ ಕಳೆದ 4 ವರ್ಷದಿಂದ ಪ್ರೀತಿಸಿದ್ದ ಅವಿವಾರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಸ್ಯಾಂಡಲ್​​ವುಡ್​ನ ಸ್ಟಾರ್​ ನಟರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಸಮಾರಂಭವು ಕುಟುಂಬಸ್ಥರು ಆಪ್ತರ ಸಮ್ಮುಖದಲ್ಲಿ ಮಾತ್ರ ನಡೆಯಲಿದೆ. ಸಂಕ್ರಾಂತಿ ಬಳಿಕ ಅಭಿ ಮತ್ತು ಅವಿವಾರ ಮದುವೆ ದಿನ ನಿರ್ಧಾರವಾಗಲಿದೆ.

Copyright © All rights reserved Newsnap | Newsever by AF themes.
error: Content is protected !!