November 22, 2024

Newsnap Kannada

The World at your finger tips!

WhatsApp Image 2022 12 02 at 11.28.41 AM

ತಪ್ಪು ಸ್ಕ್ಯಾನಿಂಗ್ ವರದಿ ಮಗುವಿನ ಅಸಹಜ ಬೆಳವಣಿಗೆಗೆ ಕಾರಣ – ಮದ್ದೂರಿನ ಡಯಾಗ್ನೋಸ್ಟಿಕ್ ಸೆಂಟರ್‌ಗೆ 15 ಲಕ್ಷ ರೂ. ದಂಡ

Spread the love

ಮದ್ದೂರಿನ ಡಿ-2 ಡಯಾಗ್ನೋಸ್ಟಿಕ್ ಸೆಂಟರ್‌ ತಪ್ಪು ಸ್ಕ್ಯಾನಿಂಗ್ ವರದಿ ನೀಡಿ ಮಗುವಿನ ಅಸಹಜ ಬೆಳವಣಿಗೆಗೆ ಕಾರಣವಾಗಿದೆ. ಆದ್ದರಿಂದ ಇದೀಗ ಅಸಹಜ ಬೆಳವಣಿಗೆ ಹೊಂದಿದ ಮಗುವಿನ ಜನನಕ್ಕೆ ಕಾರಣವಾದ ಮದ್ದೂರಿನ ಡಿ-2 ಡಯಾಗ್ನೋಸ್ಟಿಕ್ ಸೆಂಟರ್‌ಗೆ 15 ಲಕ್ಷ ರೂಪಾಯಿ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ.

ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಸಿಂಧುಶ್ರೀ ಎಂಬುವರು ಗರ್ಭಿಣಿಯಾದ 20ನೇ ವಾರದ ಸ್ಕ್ಯಾನಿಂಗ್ ಪರೀಕ್ಷೆಗಾಗಿ ವೈದ್ಯರ ಬಳಿ ಹೋಗಿದ್ದರು. ನಂತರ ಅವರು ವೈದ್ಯರ ಸಲಹೆ ಮೇರೆಗೆ ಮದ್ದೂರಿನ ಸಾರಿಗೆ ಬಸ್ ನಿಲ್ದಾಣದ ಬಳಿ ಇರುವ ಡಿ-2 ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿದ್ದರು. ಆ ಸಮಯದಲ್ಲಿ ಸ್ಕ್ಯಾನಿಂಗ್ ಪರೀಕ್ಷೆ ನಡೆಸಿದ ವೈದ್ಯರು ಭ್ರೂಣದ ಅಸಹಜ ಬೆಳವಣಿಗೆಯನ್ನು ಪತ್ತೆಹಚ್ಚದೆ ತಪ್ಪು ಸ್ಕ್ಯಾನಿಂಗ್ ವರದಿ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸ್ಕ್ಯಾನಿಂಗ್ ವರದಿಯನ್ನು ಆಧರಿಸಿ ವೈದ್ಯರು ಸಿಂಧುಶ್ರೀಗೆ ಚಿಕಿತ್ಸೆಯನ್ನು ಮುಂದುವರೆಸಿದ್ದರು. ಆದರೆ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಸಿಂಧುಶ್ರೀಗೆ ಹೆರಿಗೆಯಾದಾಗ ಅಸಹಜವಾಗಿ ಬೆಳವಣಿಗೆ ಹೊಂದಿರುವ ಮಗು ಹುಟ್ಟಿದ್ದು ಕಂಡುಬಂದಿದ್ದು, ಇದರಿಂದ ಪೋಷಕರು ಕಂಗಾಲಾದರು. ಆ ಸಮಯದಲ್ಲಿ ವೈದ್ಯರು ಸ್ಕ್ಯಾನಿಂಗ್ ಪರೀಕ್ಷೆ ಸಮಯದಲ್ಲೇ ನೋಡಿಕೊಳ್ಳಲಿಲ್ಲ ಏಕೆ ಎಂದು ಪೋಷಕರನ್ನು ಪ್ರಶ್ನಿಸಿದ್ದಾರೆ. ಹೀಗೆ ತಪ್ಪು ಸ್ಕ್ಯಾನಿಂಗ್ ವರದಿ ನೀಡಿರುವುದು ಗೊತ್ತಿಲ್ಲದೆ ಪೋಷಕರು ಆರೋಗ್ಯವಂತ ಮಗುವನ್ನು ಪಡೆಯಲು ಆಗಲಿಲ್ಲ ಎಂದು ಮಾನಸಿಕ ಚಿಂತೆಗೀಡಾಗಿದ್ದಾರೆ .

ಗರ್ಭಿಣಿಯಾಗಿದ್ದ ವೇಳೆ 20ನೇ ವಾರಕ್ಕೆ ನಡೆಸಲಾಗುವ ಸ್ಕ್ಯಾನಿಂಗ್ ಪರೀಕ್ಷೆಯಲ್ಲಿ ಮಗುವಿನ ಹೃದಯದ ಬಡಿತ, ಕಿಡ್ನಿ, ಮೆದುಳಿನ ಬೆಳವಣಿಗೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲಾಗಿದೆ. ಸ್ಕ್ಯಾನಿಂಗ್‌ ಸಮಯದಲ್ಲಿ ಮಗು ಅಸಹಜ ಬೆಳವಣಿಗೆ ಆಗಿರುವುದು ಕಂಡುಬಂದರೆ ಅದನ್ನು ಕಾನೂನು ಬದ್ಧವಾಗಿ ತೆಗೆಯುವುದಕ್ಕೆ ಅವಕಾಶವಿದೆ. ಆ ಹಂತದಲ್ಲೇ ಸ್ಕ್ಯಾನಿಂಗ್ ಪರೀಕ್ಷಾ ವರದಿ ಸರಿಯಾದ ಕ್ರಮದಲ್ಲಿ ನೀಡಿದ್ದರೆ ಪೋಷಕರು ಮಾನಸಿಕ ಚಿಂತನೆಗೆ ಗುರಿಯಾಗುತ್ತಿರಲಿಲ್ಲ. ರಾಜ್ಯದಲ್ಲಿ 71 ಮಂದಿ ತಹಶೀಲ್ದಾರ್ ಗಳ ವರ್ಗಾವಣೆಗೆ ಆದೇಶ – ಪಟ್ಟಿ ಇಲ್ಲಿದೆ

ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ಮಹೇಶ್ ಅವರು ದೂರು ನೀಡಿದ್ದರು. ಡಿ-2 ಸ್ಕ್ಯಾನಿಂಗ್ ಸೆಂಟರ್‌ನ ತಪ್ಪು ವರದಿ ಅಸಹಜ ಬೆಳವಣಿಗೆ ಹೊಂದಿದ್ದ ಮಗುವಿನ ಜನನಕ್ಕೆ ಕಾರಣವಾಗಿದೆ ಎಂದು ವಕೀಲರು ವೇದಿಕೆ ಎದುರು ವಾದ ಮಂಡಿಸಿದ್ದರು.ವಾದ-ಪ್ರತಿವಾದಗಳನ್ನು ಆಲಿಸಿದ ವೇದಿಕೆ ಅಧ್ಯಕ್ಷೆ ಸಿ.ಎಂ.ಚಂಚಲಾ ಸದಸ್ಯ ಎಸ್.ವಸಂತಕುಮಾರ ಹಾಗೂ ಮಹಿಳಾ ಸದಸ್ಯೆ ಎಂ.ಎಸ್.ಲತಾ ತೀರ್ಪು ನೀಡಿದ್ದಾರೆ. ಅವರು, ಅಸಹಜ ಮಗುವಿನ ಜನನಕ್ಕೆ ಡಿ-2 ಸ್ಕ್ಯಾನಿಂಗ್ ಸೆಂಟರ್ ನೀಡಿದ ತಪ್ಪು ಸ್ಕ್ಯಾನಿಂಗ್ ವರದಿಯೇ ಕಾರಣ ಎನ್ನುವುದು ಸಾಬೀತಾಗಿದೆ.

ಆರು ವಾರಗಳೊಳಗೆ ಆದೇಶ ಜಾರಿಗೆ ಸೂಚನೆ

ಡಯಾಗ್ನೋಸ್ಟಿಕ್ ಸೆಂಟರ್‌ನ ವೈದ್ಯರಾದ ಡಾ.ದೀಪಕ್ ಗೌತಮ್, ಡಾ.ಬಿ.ಎಸ್.ಚೇತನ್, ಡಾ.ದಯಾನಂದ ಅವರು 15 ಲಕ್ಷ ರೂಪಾಯಿಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಮಗುವಿನ ಹೆಸರಿನಲ್ಲಿ ಠೇವಣಿ ಇಡುಬೇಕು. ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಮಗುವಿಗೆ 21 ವರ್ಷ ಆಗುವವರೆಗೂ ಪೋಷಕರಿಗೆ ನೀಡಬೇಕು. ಈ ಆದೇಶ ಆರು ವಾರಗಳೊಳಗೆ ಜಾರಿಯಾಗಬೇಕು. ಇಲ್ಲದಿದ್ದರೆ ವಾರ್ಷಿಕ ಶೇಕಡಾ 12ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು ಪಿರ್ಯಾದುದಾರರ ಪರವಾಗಿ ಆರ್.ಜಗನ್ನಾಥ್ ವಾದ ಮಂಡಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!