ಪ್ರತಿ ವರ್ಷ ನವೆಂಬರ್ 1 ರಂದು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಆವರಣದಲ್ಲಿ ಸಾಂಪ್ರದಾಯಿಕವಾಗಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಹಾರಿಸುವುದರ ಮೂಲಕ ಈ ವರ್ಷದ ರಾಜ್ಯೋತ್ಸವವವನ್ನು ಬರಮಾಡಿಕೊಂಡು, ನವೆಂಬರ್ ತಿಂಗಳು ಪೂರ್ಣ ಉದ್ಯೋಗಿಗಳಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಸ್ಪರ್ದೆಗಳನ್ನು, ಕ್ರಿಕೆಟ್ ಮತ್ತು ಪುಟ್ಬಾಲ್ ಆಟಗಳು ಮತ್ತು ಕೇರಂ,ಚಸ್, ಕನ್ನಡ ರಸ ಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಈ ಸ್ಪರ್ಧೆಗಳಲ್ಲಿ ಕಾರ್ಖಾನೆಯ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಡಾ. ಎಸ್ ವೈ ಸೋಮಶೇಖರ್ ,ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಚೀನ ಮತ್ತು ಪುರಾತತ್ವ ಇಲಾಖೆಯ ಪ್ರಾಧ್ಯಾಪಕರು ವಿಶೇಷ ಅತಿಥಿ ಯಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾನ್ವಿತ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಆರ್.ಎಸ್ ಶ್ರೀವತ್ಸನ್ ವಹಿಸಿಕೊಂಡಿದ್ದರು. ಕೆಎಫ್ಐಎಲ್ ಲೇಡೀಸ್ ಕ್ಲಬ್ ಅದ್ಯಕ್ಷರಾದ ಶ್ರೀಮತಿ ಕಮಲಾ ಗುಮಾಸ್ತೆಯವರು ಮತ್ತು ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಪ್ರದಾನ ಕಾರ್ಯದರ್ಶಿ ಶ್ರೀ ಶೇಖಪ್ಪ ಚೌಡಕಿಯವರು ಸಹ ವೇದಿಕೆಯಲ್ಲಿ ಆಹ್ವಾನಿಸಲಾಗಿತ್ತು. ಕೆಎಫ್ಐಎಲ್ ಲೇಡೀಸ್ ಕ್ಲಬ್ ಸದಸ್ಯರು ಪ್ರಾರ್ಥನೆ ಮಾಡಿದರು. ದೀಪವನ್ನು ಹಚ್ಚುವುದರ ಮೂಲಕ ಉದ್ಘಾಟನೆ ನೆರವೇರಿತು.
ವಿಶೇಷ ಆಹ್ವಾನಿತ ಅತಿಥಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಕನ್ನಡ ನಾಡಿಗೆ ಕೊಪ್ಪಳ ಮತ್ತು ವಿಜಯನಗರದ ಕೊಡುಗೆ ಬಗ್ಗೆ ಭಾಷಣ ಮಾಡುತ್ತಾ ಮಾಹಿತಿ ಮತ್ತು ವಿಷಯವನ್ನು ತಿಳಿಸಿಕೊಟ್ಟರು.
ವೇದಿಕೆ ಮೇಲೆ ಆಸಿನರಾಗಿದ್ದ ಶ್ರೀ ಶೇಖಪ್ಪ ನವರು ಮತ್ತು ಶ್ರೀಮತಿ ಕಮಲಾ ಗುಮಾಸ್ತೆಯವರು ಸಹ ಕನ್ನಡ ನಾಡು ನುಡಿ ಬಗ್ಗೆ ಮಾತನಾಡುತ್ತಾ ಕಾರ್ಖಾನೆಯಲ್ಲಿ ಕನ್ನಡದ ಬಳಕೆ ಆಗುತ್ತಿರುವುದರ ಬಗ್ಗೆ ತಿಳಿಸಿದರು.
ಅದ್ಯಕ್ಷ ಸ್ಥಾನ ವಹಿಸಿದ್ದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಶ್ರೀವತ್ಸನ್ ರವರು ಸಹ ಕಾರ್ಖಾನೆಯ ಅಭಿವೃದ್ಧಿ ಹಂತಗಳನ್ನು ತಿಳಿಸಿ ಶುಭಾಶಯ ಕೋರಿದರು. ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ.ನಾರಾಯಣ ಸಹ ಈ ಸಂಧರ್ಭದಲ್ಲಿ ತಮ್ಮ ಕನ್ನಡದ ಅನುಭವವನ್ನು ಹಂಚಿಕೊಂಡರು. ರೈತರನ್ನು ಮದುವೆಯಾಗುವ ಯುವತಿಗೆ 10 ಲಕ್ಷ ರು. ಪ್ರೋತ್ಸಾಹ ಧನಕ್ಕೆ ಆಗ್ರಹ
ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ಉದ್ಯೋಗಿಗಳಿಗೆ ಬಹುಮಾನ ನೀಡಲಾಯಿತು. ಮತ್ತು ಫೌಂಡ್ರಿ ಮತ್ತು ಪಿಐಪಿ ವಿಭಾಗದ ಕಾರ್ಮಿಕರಿಗೆ ಆದರ್ಶ ಕಾರ್ಮಿಕ ಪ್ರಶಸ್ತಿ ಮತ್ತು ಉತ್ತಮ ಕೆಲಸ ಮಾಡಿದ ಉದ್ಯೋಗಿಗಳಿಗೆ ಪ್ರಶಸ್ತಿ ಮತ್ತು ಬಹುಮಾನಗಳನ್ನು ನೀಡಿ ಗೌರವಿಸಲಾಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಎಸ್ ವೈ ಸೋಮಶೇಖರ್ ,ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಚೀನ ಮತ್ತು ಪುರಾತತ್ವ ಇಲಾಖೆಯ ಪ್ರಾಧ್ಯಾಪಕರು ವಿಶೇಷ ಅತಿಥಿ ಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದಿದ್ದನ್ನು ಗೌರವಿಸಿ ಅವರನ್ನು ಸನ್ಮಾನಿಸಲಾಯಿತು.
ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗ ಆಯೋಜಿಸಿದ್ದರು. ಸುರಕ್ಷತಾ ವಿಭಾಗದ ಅಧಿಕಾರಿ ಮುರುಳೀಧರ್ ನಾಡಿಗೇರ್ ಕಾರ್ಯಕ್ರಮ ಪೂರ್ಣ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಬೀಡು ಕಬ್ಬಿಣ ವಿಭಾಗದ ಕಾರ್ಯನಿರ್ವಾಹಕ ಉಪಾದ್ಯಕ್ಷರಾದ ಶ್ರೀ ಎಂ ಜಿ ನಾಗರಾಜ್ ಮತ್ತು ವಿವಿದ ವಿಭಾಗದ ಕಾರ್ಮಿಕರು, ಉದ್ಯೋಗಿಗಳು, ಹಿರಿಯ ಅಧಿಕಾರಿಗಳು ಮತ್ತು ಲೇಡೀಸ್ ಕ್ಲಬ್ ಸದಸ್ಯರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾದರು.
ವರದಿ
ಮುರುಳೀಧರ್ ನಾಡಿಗೇರ್
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )