ಅಮೇರಿಕಾ ಚುನಾವಣೆ: ಹಿಂಸಾಚಾರದ ಆಗರವಾದ ಯು.ಎಸ್.

Team Newsnap
1 Min Read

ಅಮೇರಿಕಾದಲ್ಲಿ ಭಾರೀ ಕಾವು ಏರಿಸಿದ್ದ ಅಮೇರಿಕಾದ ಚುನಾವಣೆಯಲ್ಲಿ
ಜೋ ಬಿಡೆನ್ ಗೆಲ್ಲುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿಪರಿತ ಮುಖಭಂಗವನ್ನು ಅನುಭವಿಸುವ ಎಲ್ಲ ಸಾಧ್ಯತೆಗಳು ಇವೆ.

ಈ ಹಿನ್ನಲೆಯಲ್ಲಿ ಟ್ರಂಪ್ ಅಭಿಮಾನಿಗಳು ಅಮೇರಿಕಾದ ಬೀದಿ ಬೀದಿಗಳಲ್ಲಿ ಹಿಂಸಾಚಾರವನ್ನು ಶುರುವಿಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಟ್ರಂಪ್ ಬಹುಮತದ ನಂಬರ್‌ವರೆಗೂ ಬರಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಇದರಿಂದ ಕೆರಳಿರುವ ಟ್ರಂಪ್ ಅಭಿಮಾನಿಗಳು ಮತ್ತು ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು, ಟ್ರಂಪ್ ಯಾವ ಯಾವ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿತ್ತಿದ್ದರೋ ಅಲ್ಲೆಲ್ಲ ಮರು ಎಣಿಕೆ ಮಾಡಬೇಕೆಂದು ಒತ್ತಾಯಿಸಿ ಹಿಂಸಾಚಾರಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಟ್ರಂಪ್ ಬಹುಮತ ಪಡೆಯಲು ಒಟ್ಟು 56 ಎಲೆಕ್ಟ್ರೋಲ್ ಮತಗಳು ಅವಶ್ಯವಿದ್ದರೆ, ಜೋ ಬಿಡೆನ್ ಬಹುಮತ ಸಾಧಿಸದೇ ಕೇವಲ 6 ಎಲೆಕ್ಟ್ರೋಲ್ ಮತಗಳ ಅಗತ್ಯವಿದೆ. ಅಲ್ಲದೇ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ, ಎಲ್ಲಾ ಎಲೆಕ್ಟ್ರೋಲ್ ಮತಗಳು ಟ್ರಂಪ್ ಅವರಿಗೇ ಬಂದರೂ ಸಹ ಮತ್ತೊಮ್ಮೆ ಅಧ್ಯಕ್ಷ ಪದವಿಗೆ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಟ್ರಂಪ್ ಅಭಿಮಾನಿಗಳು ಹಾಗೂ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರಿಂದ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a comment