ಮುರುಘಾ ಸ್ವಾಮಿ ರೀತಿಯಲ್ಲಿ ಸಿದ್ದರಾಮಯ್ಯನೂ ಕಳ್ಳ ಎಂದು ಅಹಿಂದ ಮುಖಂಡ ಮುಕುಡಪ್ಪ ಪಿಸುಮಾತುಗಳಲ್ಲಿ ಹೇಳಿರುವುದು ವೈರಲ್ ಆಗಿದೆ
ಕುರುಬ ಸಮಾಜಕ್ಕೆ ರಾಜಕೀಯ ಅಧಿಕಾರ ನೀಡುವಂತೆ ಕರೆಯಲಾಗಿದ್ದ ಪ್ರತಿಕಾಗೋಷ್ಠಿಗೂ ಮುನ್ನ ಸಿದ್ದರಾಮಯ್ಯ ವಿರುದ್ಧ ಮುಕುಡಪ್ಪ ಪಿಸು ಮಾತನಾಡಿದ್ದಾರೆ. ಈ ವೇಳೆ ಮಾಧ್ಯಮದವರು ಸಹ ಸ್ಥಳದಲ್ಲಿದ್ದರು. ಮೈಕ್‌ಗಳನ್ನೂ ಇಡಲಾಗಿತ್ತು. ಆದರೆ, ಸುದ್ದಿಗೋಷ್ಠಿ ಪ್ರಾರಂಭಕ್ಕೂ ಮೊದಲು ಮುಕುಡಪ್ಪ ಅವರು ತಮ್ಮ ಪಕ್ಕದಲ್ಲಿ ಕುಳಿತುಕೊಂಡಿದ್ದವರ ಬಳಿ ಬಾಗಿ, ಸಿದ್ದರಾಮಯ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ಪಿಸು ಮಾತನಾಡಿದ್ದಾರೆ.
ಈ ಟಗರು ಇದೆಯಲ್ಲಾ 10 ಕುರಿ ಮೇಲೆ ಹೋಗುತ್ತೆ. ಮುರುಘಾಸ್ವಾಮಿ ತರಹ ಇವನೂ ಕಳ್ಳ. ಕೆಲವು ಹೊರಗೆ ಬರುತ್ತದೆ. ಇನ್ನೂ ಕೆಲವು ಹೊರಗೆ ಬರುವುದಿಲ್ಲ. ಸಿದ್ದರಾಮಯ್ ಹುಷಾರು ಮಗ. ನಾನು ಅಷ್ಟೇ ನೀವೂ ಅಷ್ಟೇ. ಎಂದು ಮುಕುಡಪ್ಪ ಹೇಳಿದ್ದಾರೆ.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಕುಡಪ್ಪ, ಸಿದ್ದರಾಮಯ್ಯ ಅವರ ಹಿಂದೆ ಕುರುಬರು ಇದ್ದಾರೆ ಎಂಬುದು ತಪ್ಪು ಕಲ್ಪನೆ. ಜನರನ್ನು ಸೇರಿಸುವುದರಿಂದ ಬಲ ಇದೆ ಎಂದಲ್ಲ. ಇಂದಿರಾ ಗಾಂಧಿ ಸಮಾವೇಶಕ್ಕೂ ಜನ ಸೇರಿದ್ದರು. ಆದರೆ ಅವರು ಚುನಾವಣೆಯಲ್ಲಿ ಸೋತಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದವರು ಏಕೆ ಚುನಾವಣೆಯಲ್ಲಿ ಸೋತರು? ಸಿದ್ದರಾಮಯ್ಯ ಇದ್ದರೆ ಕುರುಬರು ವೋಟ್ ಹಾಕುತ್ತಾರೆ ಎಂಬುದು ಭ್ರಮೆ. ಕಾಂಗ್ರೆಸ್‌ನವರು ಈ ಭ್ರಮೆಯಲ್ಲಿ ಇದ್ದಾರೆ. ಬಾದಾಮಿಯಲ್ಲಿ ಏಕೆ ಸಿದ್ದರಾಮಯ್ಯ ನಿಲ್ಲಲು ಮುಂದಾಗುತ್ತಿಲ್ಲ? 2018ರಲ್ಲಿ ಅವರಿಗೆ ಕುರುಬರು ಮತ ಹಾಕಿಲ್ಲ. ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪರ ಕುರುಬರು ಇದ್ದಾರೆ ಅನ್ನೋದು ಸುಳ್ಳು. ಕಾಂಗ್ರೆಸ್‌ನವರು ಭ್ರಮೆಯಲ್ಲಿ ಇದ್ದಾರೆ. ಈಗ ಕಾಲ ಬದಲಾಗಿದೆ. ರಾಜ್ಯ ಸರ್ಕಾರದಲ್ಲಿ ಕುರುಬರಿಗೆ ರಾಜಕೀಯ ಅಧಿಕಾರ ನೀಡಬೇಕು. ಕುರುಬ ಸಮಾಜದ ಜನಪ್ರತಿನಿಧಿಗಳಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು. ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಸಭಾಪತಿ ಆಗಿ ಮುಂದುವರಿಸಬೇಕು. ಕುರುಬ ಸಮಾಜ ಈಗಾಗಲೇ ಬಿಜೆಪಿ ಪರವಾದ ಒಲವು ವ್ಯಕ್ತಪಡಿಸಿದೆ ಎಂದು ಮುಕುಡಪ್ಪ ಹೇಳಿದರು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್