ನೇಪಾಳದಲ್ಲಿ ಭೂಕಂಪ- 6 ಸಾವು: ದೆಹಲಿಯಲ್ಲೂ ಭೂಮಿ ಗಡಗಡ

Team Newsnap
1 Min Read

6.6 ರಿಕ್ಟರ್‌ ಮಾಪಕದಷ್ಟು ತೀವ್ರತೆಯ ಭೂಕಂಪನ ಇಂದು ಮುಂಜಾನೆ ನೇಪಾಳದಲ್ಲಿ ಸಂಭವಿಸಿ, ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.

ನೇಪಾಳದಲ್ಲಿ ಶಿಥಿಲಗೊಂಡಿದ್ದ ಹಲವು ಮನೆಗಳು ಭೂಕಂಪನದಿಂದ ಧರೆಗುರುಳಿವೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಬುಧವಾರ ನಡುರಾತ್ರಿ 2 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ. ಇದು 24 ಗಂಟೆಗಳಲ್ಲಿ ಎರಡನೇ ಭೂಕಂಪನ. ಮಂಗಳವಾರ ಮುಂಜಾನೆಯೂ 4.5 ರಿಕ್ಟರ್‌ ಪ್ರಮಾಣದಲ್ಲಿ ಭೂಮಿ ನಡುಗಿತ್ತು.

ನೇಪಾಳದ ದೋಟಿ ಜಿಲ್ಲೆಯಲ್ಲಿ ಭೂಕಂಪನದಿಂದ ಮನೆಯೊಂದು ಕುಸಿದು ಅದರಡಿ ಸಿಲುಕಿದ 6 ಮಂದಿ ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಭೂಕಂಪನದ ಕೇಂದ್ರ ಭಾರತದ ಉತ್ತರ ಪ್ರದೇಶ ರಾಜ್ಯದ ಫಿಲಿಭಿತ್‌ ನಗರದಿಂದ ಈಶಾನ್ಯಕ್ಕೆ 158 ಕಿಲೋಮೀಟರ್‌ ದೂರದಲ್ಲಿ ಹಾಗೂ 10 ಕಿಲೋಮೀಟರ್‌ ಆಳದಲ್ಲಿತ್ತು. ಸ್ಯಾಂಡಲ್ ವುಡ್ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

ಭೂಕಪಂನದ ಅನುಭವ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಆಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ. ಭಾರತೀಯ ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರ ಭೂಕಂಪನದ ತೀವ್ರತೆಯನ್ನು 6.3 ರಿಕ್ಟರ್‌ ಎಂದು ಅಂದಾಜಿಸಿದೆ.

Share This Article
Leave a comment