March 11, 2026

Newsnap Kannada

The World at your finger tips!

r car

ರೇಣುಕಾಚಾರ್ಯ ಸಹೋದರನ ಪುತ್ರ ತುಂಗಾ ನಾಲೆ ಬಳಿ ಶವವಾಗಿ ಪತ್ತೆ

Spread the love

ಹೊನ್ನಾಳಿ -ನ್ಯಾಮತಿ ನಡುವೆ ಬರುವ ತುಂಗಾ ಮೇಲ್ದಂಡೆ ನಾಲೆ ಬಳಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್‌ನ ಕಾರು ಪತ್ತೆ ಆಗಿದೆ.

ಕಾರಿನ ಜೊತೆಗೆ ಚಂದ್ರಶೇಖರ್‌ ಶವವೂ ಕೂಡ ಪತ್ತೆ ಆಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಕಳೆದ ಭಾನುವಾರ ರಾತ್ರಿ ನಿಗೂಢ ರೀತಿಯಲ್ಲಿ ಕಣ್ಮರೆ ಆಗಿದ್ದ ಚಂದ್ರಶೇಖರ್ ಇದೀಗ ಶವವಾಗಿ ಪತ್ತೆ ಆಗಿದ್ದಾರೆ. ಸೇತುವೆಯ ತಡೆಗೋಡೆ ಬಳಿ ಶವ ಪತ್ತೆಯಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಜನರು ಆಗಮಿಸಿದ್ದಾರೆ. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ತನಿಖೆ ಚುರುಕುಗೊಳಿಸಿದ್ದಾರೆ. ನವೆಂಬರ್ ಅಂತ್ಯಕ್ಕೆ ಮದ್ದೂರು ಬೈಪಾಸ್ ಸಂಚಾರಕ್ಕೆ ಅವಕಾಶ

ಈಗಾಗಲೇ ಪೊಲೀಸರು ಚಂದ್ರಶೇಖರ್ ಸ್ನೇಹಿತ ಶಿವಮೊಗ್ಗ ಮೂಲದ ಕಿರಣ್ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಡದಕಟ್ಟೆ ಬಳಿ ಜನರು ಜಮಾಯಿಸಿದ್ದು, ರೇಣುಕಾಚಾರ್ಯ ಆಕ್ರಂದನ ಮುಗಿಲುಮುಟ್ಟಿದೆ.

error: Content is protected !!