December 22, 2024

Newsnap Kannada

The World at your finger tips!

Map karnataka flag

ಕನ್ನಡ ನಾಡು ನುಡಿಗೆ ಕವಿಗಳ ಸಾಹಿತ್ಯದ ಕೊಡುಗೆ

Spread the love

ಪಂಪ-ರನ್ನರು, ಬಸವಾದಿ ಶರಣರು, ದಾಸಶ್ರೇಷ್ಠರು, ಹರಿಹರ, ರಾಘವಾಂಕ, ಕುಮಾರವ್ಯಾಸರಾದ ಪ್ರಾಚೀನ ಕವಿಗಳು, ರಸ ಋಷಿಗಳು ಹಾಗು ಕುವೆಂಪು, ಬೇಂದ್ರೆ, ಕಣವಿ, ಶಿವರುದ್ರಪ್ಪನವರಂತಹ ಆಧುನಿಕ ಕವಿ ಸಾಹಿತಿಗಳು ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿದ್ದಾರೆ.

ಕನ್ನಡ ನಾಡು ಚೆಂದ, ಕನ್ನಡ ಭಾಷೆ ಚೆಂದ. ಈ ನಾಡು, ಭಾಷೆಯನ್ನು ಸಮೃದ್ಧಗೊಳಿಸಿದ ಕವಿಗಳು ಹಲವಾರು ಸಾಹಿತ್ಯವನ್ನು ರಚಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಸಿದ್ಧವಾಗಿರುವ ಸಾಹಿತ್ಯಗಳ ನೋಟ.

ಕುವೆಂಪು :

kuvempu

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ.

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ ll

ಡಿ ಎಸ್ ಕರ್ಕಿ :

d s karki

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ

ಹುಯಿಲಗೋಳ ನಾರಯಣರು :

huyilagola

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು

ಆರ್ ಎನ್ ಜಯಗೋಪಾಲ್ :

ಇದೆ ನಾಡು ಇದೆ ಭಾಷೆ
ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೆ ಇರಲಿ
ಕನ್ನಡವೇ ನಮ್ಮ ಉಸಿರಲ್ಲಿ.

jayagopal

ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಹೋ ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ
ಮಮತೆಯ ಮಾತೆಗೆ ಭಾಗ್ಯದ ದಾತೆಗೆ
ಮಾಡುವೆ ಭಕ್ತಿಯ ವಂದನೆ.

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು

ಚಿ.ಉದಯಶಂಕರ್ :

udaya shankar 1

ಒಂದೇ ನಾಡು ಒಂದೇ ಕುಲವು
ಒಂದೇ ದೈವವು.

ನಾವಾಡುವ ನುಡಿಯೇ ಕನ್ನಡ ನುಡಿ,
ಚಿನ್ನದ ನುಡಿ, ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ,
ಅಂದದ ಗುಡಿ, ಚೆಂದದ ಗುಡಿ

ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ.

g v ayar

ಜಿ ವಿ ಅಯ್ಯರ್ :

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನಿ

ಕೆ ಎಸ್ ನಿಸಾರ್ ಅಹಮದ್ :

k s nisar

ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ.
ನಿತ್ಯ ಹರಿದ್ವರ್ಣವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ, ತಾಯಿ ನಿತ್ಯೋತ್ಸವ

ಹಂಸಲೇಖ :

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು…
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ…
ಬದುಕಿದು ಜಟಕಾ ಬಂಡಿ..

hamsalekha

ಕನ್ನಡ
ರೋಮಾಂಚನವೀ ಕನ್ನಡ

ಕಸ್ತೂರಿ ನುಡಿಯಿದು,
ಕರುಣಾಳು ಮಣ್ಣಿದು
ಚಿಂತಿಸು, ವಂದಿಸು,
ಪೂಜಿಸು, ಪೂಜಿಸು

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ, ಓ ಅಭಿಮಾನಿ

ರಾಷ್ಟ್ರಕೂಟ ಹೊಯ್ಸಳ ಮುಂತಾದ ರಾಜವಂಶದವರು ಆಳುವುದಲ್ಲದೆ ರಾಷ್ಟ್ರದ ಇತಿಹಾಸದಲ್ಲಿ ತಮ್ಮ ಕೀರ್ತಿಪತಾಕೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ.

ಬೇಲೂರು-ಹಳೆಬೀಡು, ಬದಾಮಿ-ಪಟ್ಟದಕಲ್ಲು, ಐಹೊಳೆ ಹಂಪಿ ಮುಂತಾದ ಸ್ಥಳಗಳು ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಗೆ ಸಾಕ್ಷಿಯಾಗಿವೆ. ಪ್ರಾಚೀನ ಕಾಲದಿಂದಲೂ ನಮ್ಮ ನಾಡು ಧರ್ಮ, ಸಾಹಿತ್ಯ, ಸಂಗೀತ, ನೃತ್ಯ, ಕಲೆ, ಕ್ರೀಡೆ, ಶಿಲ್ಪ ಮತ್ತು ವಾಸ್ತು ಶಿಲ್ಪಗಳಿಗೆ ಹೆಸರಾದುದು.


Copyright © All rights reserved Newsnap | Newsever by AF themes.
error: Content is protected !!