ಲೋಕಾಯುಕ್ತ ದಿಂದ ಅಕ್ರಮ ಆಸ್ತಿ ಪತ್ತೆ: BBMP ಮೌಲ್ಯಮಾಪಕನಿಗೆ 40 ಲಕ್ಷ ದಂಡ, 4 ವರ್ಷ ಕಠಿಣ ಜೈಲು ಶಿಕ್ಷೆ

Team Newsnap
1 Min Read

ಬೆಂಗಳೂರಿನ ಬಿಬಿಎಂಪಿ ಮೌಲ್ಯಮಾಪಕ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೌಲ್ಯಮಾಪಕ ಆರ್. ಪ್ರಸನ್ನಕುಮಾರ್ ಗೆ 40 ಲಕ್ಷ ದಂಡ ಹಾಗೂ 4 ವರ್ಷ ಕಠಿಣ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿ ಆದೇಶಿಸಿದೆ.

ಬೆಂಗಳೂರಿನ 23ನೇ ಸಿಟಿ ಸಿವಿಲ್ & ಸೆಷನ್ಸ್ ಕೋರ್ಟ್ಈ ಆದೇಶ ಹೊರಡಿಸಿದೆ. ದಂಡ ಪಾವತಿಗೆ ತಪ್ಪಿದರೆ 4 ತಿಂಗಳ ಸಾದಾ ಜೈಲುವಾಸ ವಿಧಿಸಿ ಆದೇಶಿಸಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ 2013ರಲ್ಲಿ ಬಿಬಿಎಂಪಿ ಮೌಲ್ಯಮಾಪಕ R.ಪ್ರಸನ್ನಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿತ್ತು .

ಈ ವೇಳೆ ಶೇ 31ರಷ್ಟು ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿತ್ತು. ಬಳಿಕ ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಕುರಿತು ಬೆಂಗಳೂರಿನ 23ನೇ ಸಿಟಿ ಸಿವಿಲ್ & ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.

Share This Article
Leave a comment