January 9, 2025

Newsnap Kannada

The World at your finger tips!

WhatsApp Image 2022 10 19 at 5.45.06 PM

MP Sumalatha gave compensation - Malavalli MLA Annadani slander for credit ಸಂಸದೆ ಸುಮಲತಾ ಪರಿಹಾರ ಕೊಡಿಸಿದ್ದು - ಮಳವಳ್ಳಿ ಶಾಸಕ ಅನ್ನದಾನಿ ಕ್ರೆಡಿಟ್ ಗಾಗಿ ಅಪಪ್ರಚಾರ- ಸೋಮು

ಸಂಸದೆ ಸುಮಲತಾ ಪರಿಹಾರ ಕೊಡಿಸಿದ್ದು – ಮಳವಳ್ಳಿ ಶಾಸಕ ಅನ್ನದಾನಿ ಕ್ರೆಡಿಟ್ ಗಾಗಿ ಅಪಪ್ರಚಾರ- ಸೋಮು

Spread the love

ಸಂಸದೆ ಸುಮಲತಾ ಅಂಬರೀಶ್ ಅವರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಮಳವಳ್ಳಿ ಪಟ್ಟಣದಲ್ಲಿ ಹತ್ಯೆಗೀಡಾದ ಶಾಲಾ‌ ಬಾಲಕಿ ಪೋಷಕರಿಗೆ ೧೦ ಲಕ್ಷರುಪರಿಹಾರ ಘೋಷಣೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆದರೆ ಶಾಸಕ ಡಾ.ಕೆ.ಅನ್ನದಾನಿ ಮಾತ್ರ ನನ್ನ ಮನವಿ ಮೇರೆಗೆ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಖಂಡಿಸಿದ್ದಾರೆ .

ಮಳವಳ್ಳಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಸೋಮ ಶೇಖರ್, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿರುವ ಶಾಸಕರು ನನ್ನ ಮನವಿ ಮೇರೆಗೆ ಸರ್ಕಾರ ೧೦ ಲಕ್ಷರು ಪರಿಹಾರ ಘೋಷಣೆ ಮಾಡಿದ್ದು ಇಂದು ಚೆಕ್ ವಿತರಿಸಲಾಗಿದೆ . ಈ ಕಾರ್ಯಕ್ರಮಕ್ಕೆ ಎಲ್ಲಾ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕೆಂದು ಕೋರಿರುವುದು ಅವರ ಕೀಳು ಮಟ್ಟದ ರಾಜಕೀಯ ವರ್ತನೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಈ ಘಟನೆ ನಡೆದ ಕೂಡಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸಂಸದರು ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು.ಮಂಡ್ಯ ವಿ ವಿ ಅಭಿವೃದ್ದಿಗೆ ಹಿರಿಯ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ: ಡಾ.ಪುಟ್ಟರಾಜು

ಸಂಸದರ ಮನವಿಗೆ ಸ್ಪಂದಿಸಿದ ‌ಸಿಎಂ ಬಾಲಕಿ ಕುಟುಂಬಕ್ಕೆ ೧೦ ಲಕ್ಷ ರೂ ಪರಿಹಾರ ನೀಡುವುದಾಗಿ‌‌ ಕೆ. ಆರ್. ಪೇಟೆಯಲ್ಲಿ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿರುವುದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ ಎಂದು ಹೇಳಿದರು.

ಹೀಗಿರುವಾಗ ನನ್ನ ಮನವಿ ಮೇರೆಗೆ ಸರ್ಕಾರ ಪರಿಹಾರ ನೀಡಿದೆ ಎಂದು ಶಾಸಕರು ಪ್ರಚಾರ ಮಾಡಿಕೊಳ್ಳುತ್ತಿರು ವುದು ಹಾಸ್ಯಾಸ್ಪದವಾಗಿದೆ ಎಂದಿರುವ ಸೋಮಶೇಖರ್ ಈ ಹಿಂದೆ ಸಹ ಕೆಲವೇ ಜನರನ್ನು ಸೇರಿಸಿಕೊಂಡು ಮಂಡ್ಯಕ್ಕೆ ಪಾದಯಾತ್ರೆ ಮಾಡಿ ಈ ಪಾದಯಾತ್ರೆಯಿಂದಲೇ ಸರ್ಕಾರ ಮೈಷುಗರ್ ಕಾರ್ಖಾನೆ ಆರಂಭಿಸಿದೆ ಎಂದು ಕೀಳು‌ ಪ್ರಚಾರ ಪಡೆದುಕೊಂಡಿದ್ದರು ಎಂದು ಟೀಕಿಸಿದರು.

ಇಂತಹ ಕೀಳು ಪ್ರಚಾರದ ರಾಜಕಾರಣ ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವಂತೆ ಸೋಮಶೇಖರ್ ಶಾಸಕರಿಗೆ ಸಲಹೆ ನೀಡಿದರು.ಗೋಷ್ಠಿಯಲ್ಲಿ ಸತೀಶ್, ನಾಗರಾಜು, ಸುರೇಶ್ ಹಾಜರಿದ್ದರು.

Copyright © All rights reserved Newsnap | Newsever by AF themes.
error: Content is protected !!