- ಟ್ಯೂಶನ್‍ಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ
- ಮರಣೋತ್ತರ ಪರೀಕ್ಷೆಯಲ್ಲಿ ದೃಢ
ಮಂಡ್ಯದ ಮಳವಳ್ಳಿಯಲ್ಲಿ ಟ್ಯೂಶನ್‍ಗೆ ಹೋಗಿದ್ದ ಬಾಲಕಿ ಕೊಲೆ ಪ್ರಕರಣದ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಆಗಿರುವುದು ದೃಢಪಟ್ಟಿದೆ, ಟ್ಯೂಶನ್ ಮೇಲ್ವಿಚಾರಕ ಕಾಂತರಾಜು ಈ ಹೇಯ ಕೃತ್ಯವೆಸಗಿದ್ದಾನೆ ಆ ಕಾಮುಕನನ್ನು ಬಂಧಿಸಲಾಗಿದೆ.
ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ಟ್ಯೂಶನ್‍ಗೆ ಹೋಗಿದ್ದ ಬಾಲಕಿ ನೀರಿನ ಸಂಪ್‍ನಲ್ಲಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಳು. ಈ ಸಂಬಂಧ ಮೊದಲು ಸೆಕ್ಷನ್ 302 ಪ್ರಕರಣದಡಿ ಮಳವಳ್ಳಿ ಟೌನ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವೇಳೆ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಹಾಗಾಗಿ 302 ಸೆಕ್ಷನ್ ಜೊತೆಗೆ ಪೋಸ್ಕೋ ಹಾಗೂ 307 ಪ್ರಕರಣಗಳನ್ನು ಸೇರ್ಪಡೆಗೊಳಿಸಲಾಗಿದೆ.
ಮಂಗಳವಾರ ಟ್ಯೂಶನ್ ಎಷ್ಟು ಗಂಟೆಗಿದೆ ಎಂದು ವಿಚಾರಿಸಲು ಬಾಲಕಿ ಮೇಲ್ವಿಚಾರಕನಿಗೆ ಫೋನ್ ಮಾಡಿದ್ದಳು. ಸಂಜೆ 5 ಗಂಟೆಗೆ ಟ್ಯೂಶನ್ ಇದ್ದರೂ ಬೆಳಗ್ಗೆ 11.30ಕ್ಕೆ ಬರುವಂತೆ ಕಾಂತರಾಜು ಹೇಳಿದ್ದನು. ಮುರುಘಾ ಸ್ವಾಮೀಜಿಯಿಂದ ಮತ್ತಿಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ: ಮೈಸೂರಿನಲ್ಲಿ FIR ದಾಖಲು
ನಂತರ ಟ್ಯೂಷನ್‍ಗೆ ಬಂದ ಬಾಲಕಿ ಮೇಲೆ ಕಾಂತರಾಜು ಅತ್ಯಾಚಾರವೆಸಗಿದ್ದಾನೆ. ಬಳಿಕ ವಿಚಾರ ಬಹಿರಂಗವಾಗುತ್ತದೆ ಎಂದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯ ಕತ್ತು ಹಿಸುಕಿ, ಬಳಿಕ ಕಲ್ಲಿನಿಂದ ತಲೆಯ ಭಾಗಕ್ಕೆ ಹೊಡೆದು ಹತ್ಯೆಗೈದಿದ್ದಾನೆ.
ಕೊಲೆ ನಂತರ ನಿರ್ಮಾಣ ಹಂತದ ಮನೆಯ ಸಂಪ್‍ಗೆ ಮೃತದೇಹ ಹಾಕಿ ಪರಾರಿಯಾಗಿದ್ದನು. ನೀಚ ಕೃತ್ಯ ನಡೆಸಿ ತನಗೇನು ಗೊತ್ತೇ ಇಲ್ಲ ಎಂಬಂತೆ ಬಾಲಕಿಯ ಕುಟುಂಬಸ್ಥರ ಜೊತೆ ಸೇರಿ ಆಕೆಗಾಗಿ ಹುಡುಕಾಟ ನಡೆಸಿದ್ದಾನೆ. ಅಲ್ಲದೇ ಪೊಲೀಸರು ಬಂದಾಗಲೂ ಸ್ಥಳದಲ್ಲೇ ಇದ್ದ ಕಾಂತರಾಜು ತನಗೇನು ಗೊತ್ತಿಲ್ಲ ಎಂಬಂತೆ ನಾಟಕ ಮಾಡಿದ್ದಾನೆ. ನಂತರ ಈ ಪ್ರಕರಣಕ್ಕೆ ಸಂಬಂಧ ಕಾಂತರಾಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಟ್ಯೂಷನ್ ಮೇಲೆನ ರೂಮ್‍ನಲ್ಲೇ ವಾಸವಿದ್ದ ಕಾಂತರಾಜು ಹೆಂಡತಿ, ಇಬ್ಬರು ಹೆಣ್ಣು ಮಕ್ಕಳಿಂದ ದೂರವಾಗಿ ಬದುಕುತ್ತಿದ್ದನು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು