December 27, 2024

Newsnap Kannada

The World at your finger tips!

rojar binni

ಕರ್ನಾಟಕದ ರೋಜರ್ ಬಿನ್ನಿಗೆ ಬಿಸಿಸಿಐ ಅಧ್ಯಕ್ಷ ಪಟ್ಟ : ಜಯ್ ಶಾ ಕಾರ್ಯದರ್ಶಿ ?

Spread the love

ಟೀಂ ಇಂಡಿಯಾದ ಬಿಗ್​ಬಾಸ್​ ಬದಲಾವಣೆ ಆಗುವ ಬಗ್ಗೆ ಮಾತುಕತೆಗಳು ಜೋರಾಗಿ ಕೇಳಿಬರುತ್ತಿವೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಥಾನಕ್ಕೆ 1983 ರ ವರ್ಲ್ಡ್ ​​ಕಪ್​ ವಿನ್ನರ್ ಆಲ್​ರೌಂಡರ್​ ರೋಜರ್ ಬಿನ್ನಿ ಆಯ್ಕೆ ಆಗುವ ಸಾಧ್ಯತೆ ದಟ್ಟವಾಗಿದೆ.

ಅ. 18 ಕ್ಕೆ ಸೌರವ್ ಗಂಗೂಲಿ ಅವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಈಗಿನ ಕಾರ್ಯದರ್ಶಿ ಜಯ್ ಶಾ ಆಗುತ್ತಾರೆ ಎಂದು ಎನ್ನಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಜಯ್ ಶಾ ಹಾಗೂ ಗಂಗೂಲಿ ಅವರ ಅಧಿಕಾರವಧಿಯನ್ನು ವಿಸ್ತರಿಸಲು ಅನುಮತಿ ನೀಡಿದೆ. ಹೀಗಾಗಿ ಗಂಗೂಲಿ ಸ್ಥಾನಕ್ಕೆ ರೋಜರ್ ಬಿನ್ನಿ ಹೆಸರು ಕೇಳಿಬಂದಿದೆ.

ಅಮಿತ್ ಶಾ ಪುತ್ರ ಜಯ್ ಶಾ, ಬಿಸಿಸಿಐ ಕಾರ್ಯದರ್ಶಿಯಾಗಿರುತ್ತಾರೆ, ನಿನ್ನೆ ಮುಂಬೈನಲ್ಲಿ ಬಿಸಿಸಿಐ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಸಭೆ ನಡೆದಿದೆ. ಅಕ್ಟೋಬರ್ 18 ರಂದು ಚುನಾವಣೆ ನಡೆಯಲಿದೆ. ಬಿಸಿಸಿಐ ಚುನಾವಣೆಗೆ ರೋಜರ್ ಬಿನ್ನಿ ಸ್ಪರ್ಧೆ ಮಾಡಲಿದ್ದಾರೆ. ಇಷ್ಟರಲ್ಲೇ ನಾಮಪತ್ರ ಸಲ್ಲಿಸಲಿದ್ದಾರೆ.

ದಂತಕತೆ ಕಪಿಲ್ ದೇವ್ ನೇತೃತ್ವದಲ್ಲಿ ಭಾರತದ ತಂಡ 1983ರಲ್ಲಿ ವಿಶ್ವಕಪ್ ಗೆದ್ದಿದೆ. ಈ ತಂಡದಲ್ಲಿ ರೋಜರ್ ಬಿನ್ನಿ ಆಲ್​ರೌಂಡರ್​ ಆಗಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ರಾಜೀವ್ ಶುಕ್ಲಾ ಬಿಸಿಸಿಐ ಉಪಾಧ್ಯಕ್ಷರಾಗಿಯೇ ಉಳಿಯಲ್ಲಿದ್ದಾರೆ.

ಖಜಾಂಜಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಆಶಿಶ್ ಸೆಲ್ಲರ್ ಸ್ಪರ್ಧೆ ಮಾಡಲಿದ್ದಾರೆ. ಸದ್ಯ ಅರುಣ್ ಸಿಂಗ್ ಧುಮಲ್ ಬಿಸಿಸಿಐ ಖಜಾಂಚಿಯಾಗಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!