ಆದರೆ ನಾಳೆಯೇ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ (ED) ಮತ್ತೆ ನೋಟಿಸ್ ನೀಡಿದೆ.ಇದನ್ನು ಓದಿ –ಮಂಡ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪೋಲಿಸರು: ತಪ್ಪಿತಸ್ಥರ ವಿರುದ್ಧ ಕ್ರಮ – ಸಿಎಂ
ಡಿ.ಕೆ ಶಿವಕುಮಾರ್‌ಗೆ ಇಡಿಯಿಂದ ಸಮನ್ಸ್ ಬಂದಿದೆ ನಾಳೆ ದೆಹಲಿಗೆ ವಿಚಾರಣೆಗೆ ಬರಲೇಬೇಕು ಎಂದು ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ನಾಳೆ ವಿಚಾರಣೆಗೆ ಹಾಜರಾಗದಿರಲು ಡಿ.ಕೆ.ಶಿವಕುಮಾರ್ ಹಾಗೂ ಡಿಕೆ.ಸುರೇಶ್ ನಿರ್ಧರಿಸಿದ್ದಾರೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಮುನ್ನಡೆಯುತ್ತಿದೆ.
ಪಾದಯಾತ್ರೆಯಲ್ಲಿ ಭಾಗವಹಿಸಲಿರುವ ಕಾರಣದಿಂದಾಗಿ ವಿಚಾರಣೆಗೆ ಬೇರೆ ದಿನಾಂಕ ನಿಗದಿ ಮಾಡುವಂತೆ ಡಿಕೆ ಬ್ರದರ್ಸ್ ಇಡಿಗೆ ಮನವಿ ಮಾಡಿದ್ದಾರೆ.
ನಾಳೆ ಪಾದಯಾತ್ರೆ ಆದಿಚುಂಚನಗಿರಿ ಸಮೀಪ ತೆರಳಲಿದೆ ಮಠಕ್ಕೆ ರಾಹುಲ್ ಗಾಂಧಿ ಭೇಟಿ ಇದೆ. ಆ ಸಂದರ್ಭದಲ್ಲಿ ನಾವು ಇರಲೇಬೇಕಾಗುತ್ತದೆ ಎಂದು ಇಡಿಗೆ ಇಮೇಲ್ ಮೂಲಕ ಡಿಕೆ ಬ್ರದರ್ಸ್ ಮನವಿ ಮಾಡಿಕೊಂಡಿದ್ದಾರೆ. ಡಿ.ಕೆ.ಸಹೋದರರ ಮನವಿಗೆ ಇಡಿಯಿಂದ ಯಾವುದೇ ಸಮರ್ಪಕ ಪ್ರತಿಕ್ರಿಯೆ ಬಂದಿಲ್ಲ.
ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ಸಂದೇಶವು ಬಂದಿಲ್ಲ. ಆದ್ದರಿಂದ ಕಾನೂನು ತಜ್ಞರ ಸಲಹೆಯಂತೆ ವಿಚಾರಣೆಗೆ ಹಾಜರಾಗದಿರಲು ಡಿಕೆ ಬ್ರದರ್ಸ್ ತೀರ್ಮಾನಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು